Advertisement

Bhopal: ಗನ್‌ ತೊಳೆಯುವ ವೀಡಿಯೋದಿಂದ ಅಕ್ರಮ ಜಾಲ ಭೇದಿಸಿದ ಪೊಲೀಸರು

12:07 AM Aug 13, 2024 | Team Udayavani |

ಭೋಪಾಲ್‌: ಮಹಿಳೆಯೊಬ್ಬರು ಗನ್‌ ತೊಳೆಯುವ ವೀಡಿಯೋ ಆಧರಿಸಿ ಅಕ್ರಮ ಗನ್‌ ತಯಾರಿಕ ಜಾಲ ಭೇದಿಸುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮಹಿಳೆಯೊಬ್ಬರು ಬ್ರಷ್‌ ಹಾಗೂ ನೀರು ಬಳಸಿ ಗನ್‌ಗಳನ್ನು ತೊಳೆಯು ತ್ತಿರುವ ವೀಡಿಯೋ ವೈರಲ್‌ ಆಗಿತ್ತು. ಈ ವೀಡಿಯೋದಲ್ಲಿ ಗನ್‌ಗಳು ಹೊಳೆಯುವುದಕ್ಕಾಗಿ ಸೋಪು ಬಳಸುವಂತೆ ಹೇಳುತ್ತಿರುವುದು ರೆಕಾರ್ಡ್‌ ಆಗಿತ್ತು. ಈ ವೀಡಿಯೋ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಅಕ್ರಮ ಗನ್‌ ತಯಾರಿಕ ಜಾಲವನ್ನು ಭೇದಿಸಿದ್ದಾರೆ.

ವೀಡಿಯೋ ಚಿತ್ರೀಕರಿಸಿದ ಲೊಕೇಶನ್‌ ಪತ್ತೆ ಹಚ್ಚಿ, ಪೊಲೀಸರು ತೆರಳುವಷ್ಟರಲ್ಲಿ ಆರೋಪಿ ಶಕ್ತಿ ಕಪೂರ್‌ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಅಪಘಾತಕ್ಕೀಡಾಗಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಮನೆಯಲ್ಲಿ ಪೊಲೀಸರು ಡಬಲ್‌ ಬ್ಯಾರಲ್‌ ಗನ್‌, ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗನ್‌ ತಯಾರಿಗೆ ಎಲ್ಲಿಂದ ಕಚ್ಚಾವಸ್ತು ಖರೀದಿಸಿದ್ದ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next