ಹೊಸದಿಲ್ಲಿ/ ಭೋಪಾಲ್: ಮಾದಕ ವಸ್ತು ನಿಯಂತ್ರಣ ಸಂಸ್ಥೆ ಹಾಗೂ ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ಕೈಗೊಂಡಿರುವ ಕಾರ್ಯಾ ಚರಣೆಯಲ್ಲಿ ಮಧ್ಯಪ್ರದೇಶದ ಬಗ್ರೋಡಾ ಕೈಗಾರಿಕಾ ವಲಯದಲ್ಲಿ ಬರೋಬ್ಬರಿ 1,800 ಕೋಟಿ ರೂ. ಮೌಲ್ಯದ 907.09 ಕೆ.ಜಿ. ದ್ರವ ಮತ್ತು ಘನ ರೂಪದ ಮೆಫೆಡ್ರೋನ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ.
ಸುಮಾರು 2,500 ಚದರ ಯಾರ್ಡ್ ಇರುವ ಶೆಡ್‌ನಲ್ಲಿ ಅದನ್ನು ತಯಾರಿಸಲಾಗುತ್ತಿತ್ತು. ಜತೆಗೆ ಮಾದಕ ವಸ್ತು ತಯಾರಿಗೆ ಬಳಸುತ್ತಿದ್ದರೆನ್ನಲಾದ 5,000 ಕೆ.ಜಿ.ಯಷ್ಟು ಇತರ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ.
ಇಬ್ಬರನ್ನು ಬಂಧಿಸಿದ್ದು, ಅವರು ಪ್ರಮುಖ ಆರೋಪಿ ಗಳು ಎಂದು ಶಂಕಿಸಲಾಗಿದೆ. ಕಳೆದ ವಾರ ವಷ್ಟೇ ದಿಲ್ಲಿ ಪೊಲೀಸರು 5,600 ಕೋಟಿ ರೂ. ಮೌಲ್ಯದ 560 ಕೆ.ಜಿ. ಕೊಕೇನ್ ವಶಪಡಿಸಿ ಕೊಂಡಿ ದ್ದರು. ಬಂಧಿತ ಸನ್ಯಾಲ್ ಪ್ರಕಾಶ್ ಬಾನೆ 2017ರಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣ ದಲ್ಲಿ ಮುಂಬಯಿ ಪೊಲೀಸರಿಂದ ಬಂಧನ ಕ್ಕೊಳಪಟ್ಟಿದ್ದ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. 5 ವರ್ಷ ಜೈಲಿನಲ್ಲಿ ಕಳೆದ ಬಳಿಕ ಮತ್ತೆ ಅದೇ ಕೃತ್ಯದಲ್ಲಿ ತೊಡಗಿಕೊಂಡಿದ್ದ.
ಅಮೃತಸರದಲ್ಲಿ 10 ಕೋಟಿ ಕೊಕೇನ್ ವಶಕ್ಕೆ ಪಡೆದ ದಿಲ್ಲಿ ಪೊಲೀಸ್
5000 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪ್ರಕರಣದ ವಿಚಾರಣೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಅಮೃತಸರದಲ್ಲಿ 10 ಕೋಟಿ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಕಳೆದ ವಾರ ಬಹಿರಂಗವಾಗಿದ್ದ 560 ಕೆ.ಜಿ. ಕೊಕೇನ್ ವಶ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬ್ರಿಟನ್ ಪ್ರಜೆ ಜಿತೇಂದರ್ ಪಾಲ್ ಸಿಂಗ್ ನೀಡಿದ ಮಾಹಿತಿಯನ್ನು ಆಧರಿಸಿದ ದಿಲ್ಲಿ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ ಟೊಯೋಟಾ ಫಾರ್ಚುನರ್ ಕಾರು, ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಥೈಲೆಂಡ್‌ನ ಫುಕೆಟ್ ಮೂಲಕ ಕೊಕೇನ್ ಅನ್ನು ಭಾರತಕ್ಕೆ ತರಲಾಗಿತ್ತು ಎಂದು ಗೊತ್ತಾಗಿದೆ.