Advertisement

ಅಶಕ್ತ ಕಲಾವಿದರಿಗೆ ನಿಸ್ವಾರ್ಥ ಸೇವೆ: ಆಸ್ರಣ್ಣ 

10:01 AM Apr 27, 2018 | |

ಮಹಾನಗರ: ಪ್ರಸ್ತುತ ಕಾಲಘಟ್ಟದಲ್ಲಿ ಯಕ್ಷಗಾನ ಆಕರ್ಷಣೀಯವಾಗಲು ಪಟ್ಲರ ಕೊಡುಗೆ ಅಪಾರ. ಪುರಂದರದಾಸರ ಮಧುಕರ ವೃತ್ತಿಯ ದಾಸವಾಣಿಯಂತೆ ಸತೀಶ್‌ ಶೆಟ್ಟಿ ಅವರು ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮೂಲಕ ಅಶಕ್ತ ಕಲಾವಿದರಿಗೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಕಟೀಲು ತಾಯಿಯ ಸಂಪೂರ್ಣ ಆಶೀರ್ವಾದ ಅವರ ಮೇಲಿರಲಿ ಎಂದು ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಆಶಿಸಿದರು.

Advertisement

ಕುಂಜತ್ತಬೈಲ್‌ನಲ್ಲಿ ಕಟೀಲು ಮತ್ತು ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿ, ಈಗ ಅಶಕ್ತರಾಗಿರುವ ಪುರಂದರ ಅವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ನ ಪಟ್ಲ ಯಕ್ಷಾಶ್ರಯ ಯೋಜನೆಯಡಿ ನಿರ್ಮಿಸಲಿರುವ ಮನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಸ್ಥಳೀಯರಾದ ದಿವಾಕರ ಪಕ್ಕಳ, ಸುಧಾಕರ ರೈ, ಕಂಟ್ರಾಕ್ಟರ್‌ ದಿನೇಶ್‌, ಟ್ರಸ್ಟ್‌ನ ಖಜಾಂಚಿ ಸುದೇಶ್‌ ಕುಮಾರ್‌ ರೈ, ಜತೆ ಕಾರ್ಯದರ್ಶಿ ಉದಯ ಕುಮಾರ್‌ ಶೆಟ್ಟಿ ಕುಂದಾಪುರ, ಎಕ್ಕಾರು ಘಟಕದ ಸಂಚಾಲಕ ಸತೀಶ್‌ ಶೆಟ್ಟಿ ಕಟೀಲು, ಮಂಗಳೂರು ಘಟಕದ ಖಜಾಂಚಿ ರವಿ ಶೆಟ್ಟಿ ಅಶೋಕನಗರ, ಕೇಂದ್ರೀಯ ಸಮಿತಿಯ ಸದಸ್ಯರಾದ ಅಶ್ವಿ‌ತ್‌ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 

ಟ್ರಸ್ಟ್‌ನ ಸಂಘಟನ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ವಂದಿಸಿದರು. ಯೋಜನೆಯಡಿ ನಿರ್ಮಿಸುತ್ತಿರುವ ಮೂರನೇ ಮನೆ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next