Advertisement

America ಶ್ವೇತ ಭವನದಂತಿದೆ ಭೋಲೆ ಬಾಬಾ ಭವ್ಯ ಆಶ್ರಮ

11:41 PM Jul 04, 2024 | Team Udayavani |

ಹೊಸದಿಲ್ಲಿ: 121ರ ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಕುರಿತಾದ ಹೊರ ಬರುತ್ತಿರುವ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿವೆ. ಲೈಂಗಿಕ ಕಿರುಕುಳ ಪ್ರಕರಣ ಎದುರಿಸುತ್ತಿರುವ ಭೋಲೆ ಬಾಬಾ ಕೋಟ್ಯಧೀಶನಾಗಿದ್ದು, “ಫೈವ್‌ ಸ್ಟಾರ್‌’ ಆಶ್ರಮ ಹೊಂದಿದ್ದಾನೆ.

Advertisement

ಉತ್ತರ ಪ್ರದೇಶ ಮೈನ ಪುರಿಯಲ್ಲಿ 13 ಎಕ್ರೆಯಲ್ಲಿನ ಐಷಾರಾಮಿ ಆಶ್ರಮವು ಅಮೆರಿಕದ ಶ್ವೇತಭವನವನ್ನು ಹೋಲುತ್ತದೆ! ಇದರ ಮೌಲ್ಯ 50 ಕೋಟಿ ರೂ.ಗೂ ಅಧಿಕವಿದೆ. ಸ್ವಘೋಷಿತ ದೇವಮಾನ ಭೋಲೆ ಬಾಬಾನ ಮೂಲ ಹೆಸರು ಸೂರಜ್‌ ಪಾಲ್‌ ಆಗಿದ್ದು, ಆಶ್ರಮದಲ್ಲಿ ಹಲವು ಕೋಣೆಗಳಿದ್ದು, ಬಾಬಾನಿಗೆ ಮೀಸಲಾಗಿರುವ 6 ಕೋಣೆಗಳು ಹೈಟೆಕ್‌ ಆಗಿವೆ. ಮತ್ತೆ 6 ಕೋಣೆಗಳನ್ನು ಸೇವಾದಾರರಿಗೆ (ಸ್ವಯಂ ಸೇವಕರು) ನೀಡಲಾಗಿದೆ. ಉ.ಪ್ರ. ಅಲ್ಲದೆ ಮಧ್ಯ ಪ್ರದೇಶ, ರಾಜಸ್ಥಾನ ಸೇರಿ ಬೇರೆ ಕಡೆಯೂ ಆಸ್ತಿ ಹೊಂದಿದ್ದಾನೆ ಎನ್ನಲಾಗಿದೆ. ಇತರ ಬಾಬಾಗಳಂತೆ ಕೇಸರಿ ಉಡುಗೆಯನ್ನು ಭೋಲೆ ಬಾಬಾ ತೊಡುವುದಿಲ್ಲ. ಯಾವಾಗಲೂ ಶುಭ್ರ ವಸ್ತ್ರಧಾರಿ ಯಾಗಿರುತ್ತಾರೆ. ಬಿಳಿ ಶೂಗಳನ್ನು ಧರಿಸುತ್ತಾರೆ ಮತ್ತು ಸತ್ಸಂಗದಲ್ಲಿ ತಮ್ಮ ಪತ್ನಿ ಜತೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಜಾಟ್‌ ಸಮುದಾಯಕ್ಕೆ ಸೇರಿರುವ ಬಾಬಾ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಮುಸ್ಲಿಮರೂ ಇವರು ಅನುಯಾಯಿಗಳಾಗಿದ್ದಾರೆ.

ಶೀಘ್ರ ಹಾಥರಸ್‌ಗೆ ರಾಹುಲ್‌ ಭೇಟಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಸದ್ಯದಲ್ಲೇ ಹಾಥರಸ್‌ಗೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ.ವೇಣು ಗೋಪಾಲ್‌ ಹೇಳಿದ್ದಾರೆ.

ಸತ್ಸಂಗ ಆಯೋಜಕ ಕಾಣೆ
ಹಾಥರಸ್‌ನಲ್ಲಿ 121 ಜನರ ಸಾವಿಗೆ ಕಾರಣವಾದ ಕಾಲು¤ಳಿತ ಪ್ರಕರಣ ಸಂಬಂಧ ಪೊಲೀಸರು ಗುರುವಾರ 6 ಮಂದಿಯನ್ನು ಬಂಧಿಸಿದ್ದಾರೆ. ಜತೆಗೆ ಸ್ವಘೋಷಿತ ದೇವಮಾನವ ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರದ “ಮುಖ್ಯ ಸೇವಾದಾರ’ ದೇವ್‌ ಪ್ರಕಾಶ್‌ ಎಂಬವರನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದ್ದು, ಆತ ನಾಪತ್ತೆ ಯಾಗಿದ್ದಾನೆ ಎನ್ನಲಾಗಿದೆ.

ಜಾಲತಾಣಗಳಿಂದ ದೂರ
121 ಮಂದಿಯ ಜೀವಕ್ಕೆ ಎರವಾಗಿರುವ ಭೋಲೆ ಬಾಬಾ ಜಾಲತಾಣಗಳಿಂದ ದೂರ ಇದ್ದಾನೆ. ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ಯುಟ್ಯೂಬ್‌ ಸೇರಿ ಯಾವುದೇ ಜಾಲತಾಣಗಳಲ್ಲಿ ಖಾತೆಯನ್ನು ಹೊಂದಿಲ್ಲ ಎಂಬ ಅಂಶ ಗೊತ್ತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next