Advertisement

Uttara Pradesh: ಹಾಥರಸ್‌ ದುರಂತಕ್ಕೆ ಸಂಬಂಧಿಸಿ 6 ಮಂದಿ ಬಂಧನ

05:42 PM Jul 04, 2024 | Team Udayavani |

ಲಕ್ನೋ: ಉತ್ತರಪ್ರದೇಶದ ಹಾಥರಸ್‌ (Hathras Stampede) ಜಿಲ್ಲೆಯ ಫುಲ್‌ರಾಯ್‌ ಗ್ರಾಮದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 121 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ  ಇಬ್ಬರು ಮಹಿಳೆಯರು ಮತ್ತು ನಾಲ್ವರು  ಪುರುಷರು ಸೇರಿ ಆರು ಮಂದಿಯ ಬಂಧಿಸಿದ್ದು,  ಪ್ರಮುಖ ಆರೋಪಿ ದೇವ್‌  ಪ್ರಕಾಶ್ ಮಧುಕರ್ ಬಂಧನಕ್ಕೆ ನೆರವು ಆಗುವವರಿಗೆ  1 ಲಕ್ಷ ರೂಪಾಯಿ ಬಹುಮಾನವನ್ನೂ ಎಂದು ಉತ್ತರ ಪ್ರದೇಶ  ಪೊಲೀಸರು ಗುರುವಾರ ಘೋಷಿಸಿದ್ದಾರೆ.

Advertisement

“ ಬಂಧಿತರು ‘ಸೇವಾದಾರರು’ (ಸತ್ಸಂಗ ಸ್ವಯಂಸೇವಕರು) ಎಂದು ಪೊಲೀಸರು ತಿಳಿಸಿದ್ದಾರೆ. ಕಾಲ್ತುಳಿತ ಸಂಭವಿಸಿದಾಗ ಈಗ ಬಂಧಿಸಿರುವ ಆರು ಸೇವಕರು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದರು.  ಶೀಘ್ರದಲ್ಲೇ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಲಿದೆ. ಪಿತೂರಿಯಿಂದ ಈ ಘಟನೆ ಸಂಭವಿಸಿದ್ದರೆ ನಾವು ತನಿಖೆ ನಡೆಸುತ್ತೇವೆ ಎಂದು ಐಜಿ (ಅಲಿಗಢ ರೇಂಜ್) ಶಲಭ್ ಮಾಥುರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ನಾವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದೇವೆ. ಸತ್ಸಂಗದ ಸ್ವಯಂಸೇವಕರು ಸತ್ಸಂಗ ಮುಗಿದ ನಂತರ ಜನಸಂದಣಿ ನಿಭಾಯಿಸುವಾಗ ನಿರ್ಲಕ್ಷ್ಯ ತೋರಿದ್ದಾರೆ. ವಿಷಯಗಳು ಕೈ ಮೀರುತ್ತಿದ್ದಂತೆ, ಅವರು ಪರಾರಿಯಾಗಿದ್ದಾರೆ. ಘಟನೆಯ ಹಿಂದೆ ಪಿತೂರಿಯ ಯಾವುದೇ ಕೋನವಿದೆಯೇ ಎಂದು ಕೂಡ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಮಾಥುರ್ ಹೇಳಿದರು.

ಎಫ್‌ಐಆರ್‌ನಲ್ಲಿ ಭೋಲೆ ಬಾಬಾ  ಹೆಸರಿಲ್ಲ
ಐಜಿ ಮಾಥುರ್ ಪ್ರಕಾರ, ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಏಕೆಂದರೆ ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕೇಳಿಲ್ಲ.  “ಆದಾಗ್ಯೂ, ಅಗತ್ಯವಿದ್ದಲ್ಲಿ ಭೋಲೆ ಬಾಬಾ ಹಿನ್ನೆಲೆಯ ಅರಿತು ವಿಚಾರಣೆಗೆ ಒಳಪಡಿಸಲಾಗುತ್ತದೆ, ಆದರೆ ಇದು ಎಲ್ಲಾ ತನಿಖೆಯ ಹಾದಿಯ ಅವಲಂಬಿಸಿರುತ್ತದೆ. ನಾವು ಅವರ ಅಪರಾಧದ ಹಿಂದಿನ ವರದಿಗಳನ್ನುಕೂಡ ತನಿಖೆ ಮಾಡುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next