ಮುಂಬಯಿ: ಬಳ್ಕುಂಜೆ ಗ್ರಾಮದ ಕಾರಣಿಕ ದೈವ ಎಂದೇ ಪ್ರಸಿದ್ಧಿಯನ್ನು ಪಡೆದ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನದ ಮುಂಬಯಿ ಸಮಿತಿಯ ವಾರ್ಷಿಕ ಮಹಾಸಭೆಯು ಎ. 8ರಂದು ದಹಿಸರ್ ಪೂರ್ವದ ಹೊಟೇಲ್ ಸನ್‌ಶೈನ್ ಇನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿ. ಸೀತಾರಾಮ ಶೆಟ್ಟಿ ಇವರು ಮಾತನಾಡಿ, ದೈವಸ್ಥಾನದ ಅಭಿವೃದ್ಧಿಯ ಬಗ್ಗೆ ತಿಳಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ನಡೆಯಲಿರುವ ದೈವಸ್ಥಾನದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯವಾಗಿದೆ. ಧೂಮಾವತಿ ದೈವಸ್ಥಾನವು ಜೀರ್ಣೋದ್ಧಾರಗೊಳ್ಳಲು ಮೂಲ ಕಾರಣಕರ್ತರಾದ ದಿ| ಬಳುRಂಜೆಗುತ್ತು ಗೋಪಾಲ್ ಎಂ. ಶೆಟ್ಟಿ ಇವರ ಶ್ರಮ, ಸಾಧನೆಗಳಿಂದ ಈ ದೈವಸ್ಥಾನದ ಸೇವೆ ಮಾಡುವ ಭಾಗ್ಯ ನಮಗೆ ಲಭಿಸಿದೆ ಎಂದು ನುಡಿದರು.
ಸಮಿತಿಯ ಜೊತೆ ಕೋಶಾಧಿಕಾರಿ ಕರುಣಾ ಕರ ಶೆಟ್ಟಿ ಇವರು ಮಾತನಾಡಿ, ಇಂದಿನ ವಾರ್ಷಿಕ ಮಹಾಸಭೆಯಲ್ಲಿ ಉಪಸ್ಥಿತರಿರುವ ಪದಾಧಿಕಾರಿ ಗಳಿಗೆ ಮತ್ತು ಸರ್ವ ಸದಸ್ಯರಿಗೆ ಕೃತಜ್ಞತೆಗಳು. ಧೂಮಾವತಿ ದೈವಸ್ಥಾನ ಅಭಿವೃದ್ಧಿ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಉತ್ತಮ ರೀತಿ ಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ಈ ಸಭೆಯು ಸಮಿತಿಯು ಗೌರವಾಧ್ಯಕ್ಷ ವಿರಾರ್ ಶಂಕರ್ ಬಿ. ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ನಡೆದಿದ್ದು, ನಮ್ಮ ಸಮಿತಿಯ ಆಧಾರಸ್ತಂಭ ವಿರಾರ್ ಶಂಕರ್ ಶೆಟ್ಟಿ ಅವರು ಮೇ 6 ಮತ್ತು ಮೇ 7ರಂದು ನಡೆಯಲಿರುವ ನೇಮೋತ್ಸವದ ಸಂಪೂರ್ಣ ಖರ್ಚು-ವೆಚ್ಚವನ್ನು ವಹಿಸಲಿದ್ದಾರೆ. ವಾರ್ಷಿಕ ನೇಮೋತ್ಸವದಂದು ದೈವ ನುಡಿಯ ಪ್ರಕಾರ ಈ ನೇಮೋತ್ಸವವು ನಡೆಯಲಿದ್ದು, ಪದಾಧಿಕಾರಿಗಳು, ಬಳುRಂಜೆ ಗ್ರಾಮಸ್ಥರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. ಉಪಾಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ಅವರು ಮಾತನಾಡಿ, ನಮ್ಮ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವದ ವಿವರಗಳನ್ನು ನೀಡಿದರು. ಕೆಲವೊಂದು ಉತ್ತಮ ಸಲಹೆಗಳನ್ನು ನೀಡಿ ಸಲಹೆ ನೀಡಿದರು. ಮೇ 6 ಮತ್ತು ಮೇ 7ರಂದು ನಡೆಯಲಿರುವ ನೇಮೋತ್ಸವದಲ್ಲಿ ಬಳುRಂಜೆಯ ಸರ್ವ ಗ್ರಾಮಸ್ಥರು ಪಾಲ್ಗೊಂಡು ಸಹಕರಿಸಬೇಕು ಎಂದರು.
ನೇಮೋತ್ಸವದ ಸಂದರ್ಭದಲ್ಲಿ ಕ್ಯಾಟರಿಂಗ್‌ಗೆ
ಬೇಕಾಗುವ ಎಲ್ಲ ರೀತಿಯ ಸಾಮಗ್ರಿಗಳನ್ನು ಬಳುRಂಜೆ ಪಡುಮನೆಯ ಕುಟುಂಬಸ್ಥರು ನೀಡಲಿ ದ್ದಾರೆ. ಧೂಮಾವತಿ ದೈವದ ನುಡಿಯ ಪ್ರಕಾರ ಬಂಡಿ ವಾಹನವನ್ನು ಮುಂಬಯಿ ಅಭಿವೃದ್ಧಿ ಸಮಿತಿಯ ಸದಸ್ಯೆ ಬಳುRಂಜೆಗುತ್ತು ಮಲ್ಲಿಕಾ ಯಶವಂತ್ ಶೆಟ್ಟಿ ನೀಡಲಿದ್ದಾರೆ. ದೈವದ ಬಂಡಿ ಮತ್ತು ಸಾನಾದಿಗೆಗಳನ್ನು ಇಡಲು ಸ್ಥಳದಾನವನ್ನು ದಿ| ಮಿತ್ತಗುತ್ತು ಸಂಜೀವ ಅಜಿಲ ಅವರ ಸ್ಮರಣಾರ್ಥ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸೇವಾರ್ಥವಾಗಿ ನೀಡಿದ್ದಾರೆ. ಈ ಜಾಗದಲ್ಲಿ ಕಟ್ಟಡವನ್ನು ದಿ| ಬಳುRಂಜೆಗುತ್ತು ಗೋಪಾಲ್ ಎಂ. ಶೆಟ್ಟಿ ಅವರ ಪತ್ನಿ ಇನ್ನ ಮಡ್ಮಣ್‌ಗುತ್ತು ಸರಳಾ ಗೋಪಾಲ್ ಶೆಟ್ಟಿ ಮತ್ತು ಮಕ್ಕಳ ಸೇವೆಯ ಮೂಲಕ ನಿರ್ಮಿಲಾಗುವುದು. ಮುಂದಿನ ದಿನಗಳಲ್ಲಿ ದೈವಸ್ಥಾನದ ಮುಂಬಯಿ ಅಭಿವೃದ್ಧಿ ಸಮಿತಿ ಸರ್ವ ಸಹಕಾರ ನೀಡಲಿದೆ ಎಂಬ ಭರವಸೆ ನನಗಿದೆ ಎಂದರು.
ವಾರ್ಷಿಕ ಮಹಾಸಭೆಯ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಕಳೆದ ವಾರ್ಷಿಕ ಲೆಕ್ಕ ಪತ್ರವನ್ನು ಡಾ| ಕೆ. ಕೆ. ಶೆಟ್ಟಿ ಇವರು ಮಂಡಿಸಿ, ಅನುಮೋದಿಸಿಕೊಂಡರು. ಸಭಾ ಕಾರ್ಯಕ್ರಮದ ಮಧ್ಯೆ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಹೆಲ್ತ್ ಸಾಯನ್ಸ್ ಸಹಯೋಗದ ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಫಿ ನ್ಯೂರೋಲಾಜಿ ಮತ್ತು ನ್ಯೂರೋ ಸರ್ಜರಿ ವಿಭಾಗದಲ್ಲಿ 7ನೇ ರ್‍ಯಾಂಕ್ ಗಳಿಸಿದ ದಕ್ಷ ಸದಾನಂದ ಶೆಟ್ಟಿ ಇವರನ್ನು ಗೌರವಿಸಲಾಯಿತು. ಅಲ್ಲದೆ ಬಳುRಂಜೆ ಗ್ರಾಮದ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಮುಂದಿನ ವಾರ್ಷಿಕ ನೇಮೋತ್ಸವದಂದು ಸಮ್ಮಾನಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಡಾ| ಕೃಷ್ಣ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಡಾ| ಕೃಷ್ಣ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಎಸ್. ಶೆಟ್ಟಿ, ಕೋಶಾಧಿಕಾರಿ ಹರೀಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಎಸ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಗ್ರಾಸ್ಥರು, ಮತ್ತಿತರರು ಉಪಸ್ಥಿತರಿದ್ದರು.