Advertisement

Bhojshala; ಪೂಜೆ ಅವಕಾಶಕ್ಕಾಗಿ ಜೈನರ ಅರ್ಜಿ

01:58 AM Jul 02, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದ ವಿವಾದಿತ ಭೋಜಶಾಲಾ – ಕಮಲ್‌ ಮೌಲಾ ಮಸೀದಿ ಸಂಕೀರ್ಣವು ತಮಗೆ ಸೇರಿದ್ದೆಂದು ಹಿಂದೂಗಳು ಮತ್ತು ಮುಸ್ಲಿಮರು ವಾದಿಸುತ್ತಿರುವಂತೆಯೇ ಇದೀಗ ಸಂಕೀರ್ಣ ತಮಗೆ ಸೇರಿದ್ದೆಂದು ಜೈನ ಸಮುದಾಯ ಧ್ವನಿ ಎತ್ತಿದೆ.

Advertisement

ಸಂಕೀರ್ಣದಲ್ಲಿ ಜೈನ ಸಮುದಾಯಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಮಧ್ಯ ಪ್ರದೇಶದ ಹೈಕೋರ್ಟ್‌ ನಲ್ಲಿ ರಿಟ್‌ ಅರ್ಜಿಯೊಂದು ಸಲ್ಲಿಕೆಯಾ ಗಿದೆ. ದಿಲ್ಲಿ ಮೂಲದ ಸಾಮಾಜಿಕ ಕಾರ್ಯಕರ್ತರಾದ ಸಲೇಕ್‌ ಚಾಂದ್‌ ಜೈನ್‌ ಎಂಬವರು ಹೈಕೋರ್ಟ್‌ನ ಇಂದೋರ್‌ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ವಿವಾದಿತ ಸಂಕೀರ್ಣವು ಒಂದು ಕಾಲದಲ್ಲಿ ಜೈನರ ಗುರುಕುಲ ಹಾಗೂ ದೇಗುಲವಾಗಿತ್ತು. ಅಲ್ಲದೇ, ದೇವಾಲಯದಲ್ಲಿ ಅಂಬಿಕಾ ದೇವಿಯ ವಿಗ್ರಹವನ್ನೂ ಪ್ರತಿಷ್ಠಾಪಿಸಲಾ ಗಿದೆ. ಈ ಹಿನ್ನೆಲೆಯಲ್ಲಿ ಜೈನ ಸಮುದಾ ಯಕ್ಕೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಲಾಗಿದೆ. ಈ ವಾರದೊಳಗೇ ಪೀಠ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸಂಕೀರ್ಣದಲ್ಲಿ ಎಎಸ್‌ಐ ಈಗಾಗಲೇ 98 ದಿನಗಳ ಸಮೀಕ್ಷೆ ನಡೆಸಿದ್ದು, 39 ವಿಗ್ರಹ ಭಗ್ನಾವಶೇಷಗಳು ಪತ್ತೆಯಾಗಿ ರುವ ಬಗ್ಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next