ಲಕ್ನೋ: ಸಿನಿಮಾ ನಿರ್ದೇಶಕರೊಬ್ಬರು ಹೊಟೇಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಸೋನ್ ಭದ್ರದಲ್ಲಿ ನಡೆದಿರುವುದು ವರದಿಯಾಗಿದೆ.
ಸುಭಾಷ್ ಚಂದ್ರ ತಿವಾರಿ ಮೃತ ನಿರ್ದೇಶಕ.
ಚಿತ್ರೀಕರಣಕ್ಕೆಂದು ಸೋನ್ ಭದ್ರದ ಹೊಟೇಲ್ ರೂಮ್ ವೊಂದರಲ್ಲಿ ತಮ್ಮ ತಂಡದೊಂದಿಗೆ ತಂಗಿದ್ದರು. ಬುಧವಾರ ರಾತ್ರಿ (ಮೇ.24 ರಂದು) ಅವರು ಶವವಾಗಿ ಪತ್ತೆಯಾಗಿದ್ದಾರೆ.
“ಅವರ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಸ್ಟ್ ಮಾರ್ಟಂ ವರದಿ ಪಡೆದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧೀಕ್ಷಕ (ಎಸ್‌ಪಿ) ಯಶ್ವೀರ್ ಸಿಂಗ್ಎ ಎನ್‌ಐಗೆ ಹೇಳಿದ್ದಾರೆ.
Related Articles
ಮಹಾರಾಷ್ಟ್ರ ಮೂಲದವರಾದ ಸುಭಾಷ್ ಚಂದ್ರ ತಿವಾರಿ ಭೋಜ್ ಪುರಿ ಸಿನಿಮಾರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
ಬುಧವಾರ ಕಿರುತೆರೆ ನಟಿ ವೈಭವಿ ಉಪಾಧ್ಯಾಯ, ನಿತೇಶ್ ಪಾಂಡೆ ಮೃತಪಟ್ಟಿದ್ದರು. ಇದಲ್ಲದೆ ಮೇ. 22 ರಂದು ಆದಿತ್ಯ ಸಿಂಗ್ ರಜಪೂತ್ ವಾಶ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು.