Advertisement

ಖ್ಯಾತ ಭೋಜ್‌ ಪುರಿ ನಟ ದಿನೇಶ್‌ ಲಾಲ್‌ ಯಾದವ್‌ ಬಿಜೆಪಿ ಸೇರ್ಪಡೆ

09:13 AM Mar 29, 2019 | Hari Prasad |

ಲಕ್ನೋ: ಬಹುಭಾಷಾ ಚಿತ್ರನಟಿ ಜಯಪ್ರದಾ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇ ಖ್ಯಾತ ಭೋಜ್‌ ಪುರಿ ನಟ ಮತ್ತು ಗಾಯಕ ದಿನೇಶ್‌ ಲಾಲ್‌ ಯಾದವ್‌ ಅವರು ಇಂದು ಕೇಸರಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದಿನೇಶ್‌ ಲಾಲ್‌ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ‘ನಿರಹ್ವಾ’ ಎಂದೇ ಖ್ಯಾತರಾಗಿರುವ ದಿನೇಶ್‌ ಲಾಲ್‌ ಅವರಿಗೆ ಉತ್ತರ ಭಾರತದಾದ್ಯಂಥ ಅಪಾರ ಅಭಿಮಾನಿ ವರ್ಗವಿದೆ. ಹಲವಾರು ಚಿತ್ರಗಳಲ್ಲಿ ದಿನೇಶ್‌ ಲಾಲ್‌ ಅವರು ನಟಿಸಿದ್ದಾರೆ ಮತ್ತು ತಮ್ಮ ನಟನೆಗಾಗಿ ಹಲವಾರು ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ‘ಬಾರ್ಡರ್‌’ ‘ಶೇರ್‌ – ಇ- ಹಿಂದೂಸ್ಥಾನ್‌’ ಸೇರಿದಂತೆ ದೇಶಭಕ್ತಿಯನ್ನ ಸಾರುವ ಹಲವಾರು ಚಿತ್ರಗಳಲ್ಲಿಯು ನಟಿಸಿರುವ ಖ್ಯಾತಿ ಈ ಭೋಜ್‌ ಪುರಿ ನಟನದ್ದಾಗಿದೆ.
Lucknow: Bhojpuri singer and actor Dinesh Lal Yadav ‘Nirhua’ joins BJP. pic.twitter.com/HFim2BEmKy

Advertisement

ಇನ್ನೋರ್ವ ಭೋಜ್‌ ಪುರಿ ಸೂಪರ್‌ ಸ್ಟಾರ್‌ ರವಿ ಕಿಶನ್‌ ಸಹ ಭಾರತೀಯ ಜನತಾ ಪಕ್ಷದಲ್ಲಿದ್ದು ಈ ಬಾರಿಯ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಕುರಿತಾದ ಸಸ್ಪೆನ್ಸ್‌ ಹಾಗೇಯೇ ಉಳಿದಿದೆ. ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಆದರೆ ಎಲ್ಲಿಂದ ಎಂಬುದನ್ನು ಪಕ್ಷವೇ ನಿರ್ಧರಿಸಲಿದೆ’ ಎಂದು ರವಿ ಕಿಶನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next