ಭಿವಂಡಿ: ಭಿವಂಡಿ ನಗರದ ಬಿಜೆಪಿ ಅಧ್ಯಕ್ಷ ಹಾಗೂ ಸ್ಥಳೀಯ ನಗರಸೇವಕರಾಗಿರುವ ಸಂತೋಷ್ ಎಂ. ಶೆಟ್ಟಿ ಮತ್ತು ನಗರಸೇವಕಿ ಶಶಿಲತಾ ಸಂತೋಷ್ ಶೆಟ್ಟಿ ಇವರ ನಿರಂತರ ಪ್ರಯತ್ನದಿಂದಾಗಿ ಇಲ್ಲಿನ ಪದ್ಮಾನಗರ ವಾಟರ್ ಸಪ್ಲೆ„ ಕಾಲನಿಯಲ್ಲಿ ನಿರ್ಮಿ ಸಲಾಗಿರುವ ಸುವರ್ಣ ಭೂಮಿ ಬುದ್ಧ ವಿಹಾರ ಇದರ5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಈ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋ ಜಿಸಿದ್ದು, ಸಂಸದ ಕಪಿಲ್ ಪಾಟೀಲ್ ಅವರು ಬುದ್ಧ ಮೂರ್ತಿಗೆ ಪೂಜೆಗೈಯುವುದರ ಮೂಲಕ ಇವುಗಳ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಸಂಸದ ಕಪಿಲ್ ಪಾಟೀಲ್ ಅವರು, ಭಗವಾನ ಬುದ್ಧ ಬೋಧಿಸಿರುವ ತತ್ವಗಳು ಮತ್ತು ಅವರ ಶಾಂತಿ ಸಂದೇಶವನ್ನು ಭಾರತೀಯರೆಲ್ಲರು ಅನುಸರಿಸಿದರೆ ದೇಶದಲ್ಲಿ ಶಾಂತಿ ನೆಲೆಸಿ ಎಲ್ಲರು ಸುಖ-ಸಂತೋಷದಿಂದಿರುತ್ತಾರೆ ಎಂದರು.
ಇತ್ತೀಚೆಗೆ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತೋತ್ಸವ ನಿಮಿತ್ತ ನಗರಸೇವಕ ಸಂತೋಷ್ ಎಂ. ಶೆಟ್ಟಿ ಅವರು ಭಿವಂಡಿಯಲ್ಲಿ ಆಯೋಜಿಸಿದ್ದ 125 ತಾಸು ನಿರಂತರ ಅಂಬೇಡ್ಕರ್ ಸಾಹಿತ್ಯದ ಪಠಣ ಕಾರ್ಯಕ್ರಮ ಕುರಿತು ಸಂಸದ ಕಪಿಲ್ ಪಾಟೀಲ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಉಲ್ಲಾಸನಗರ ತಕ್ಷಶಿಲ ಬುದ್ಧ ವಿಹಾರದ ಮಹಾಸಂಘ ನಾಯಕ ಭಂತೆ ಡಾ| ಎನ್. ಆನಂದ್ ಮಹಾಥೆರೊ ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.
ಡ್ರೋನ್ ಫೌಂಡೇಶನ್ ಅವರ ವತಿಯಿಂದ ಆಯೋಜಿಸಲಾಗಿದ್ದ ವೈದ್ಯಕೀಯ ಶಿಬಿರ ಕಾರ್ಯಕ್ರವನ್ನು ನಗರಸೇವಕ ಸಂತೋಷ್ ಎಂ. ಶೆಟ್ಟಿ ಅವರು ಉದ್ಘಾಟಿಸಿದರು.
ಆರ್‌ಪಿಐ ನಗರಾಧ್ಯಕ್ಷ ಮಹೇಂದ್ರ ಗಾಯ್ಕವಾಡ್, ನಗರಸೇವಕ ಸುಮಿತ್ ಪಾಟೀಲ್, ನಗರಸೇವಕಿ ಶಶಿಲತಾ ಶೆಟ್ಟಿ, ಮಾಜಿ ನಗರಸೇವಕ ಕೆಕೆ ಕಲ್ಯಾಡಪ್, ರಾಮು ವಡಲಾಕೋಂಡಾ, ಅಂಬಾದಾಸ್ ಗಾಯ್ಕವಾಡ್, ರತನ್ ವಾವØಳ್, ಪ್ರಭಾಕರ್ ಜಾಧವ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.