Advertisement
ಆ. 30 ರಂದು ಅಸೋಸಿಯೇಶನ್‌ನ ಕಚೇರಿಯಲ್ಲಿ ನಡೆದ ವಿಶೇಷ ವಾರ್ಷಿಕ ಸರ್ವ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಸೋಸಿಯೇಶನ್‌ನ ಸ್ಥಾಪಕ ಅಧ್ಯಕ್ಷ ಕಡಂದಲೆ ಪರಾರಿ ಪ್ರಭಾಕರ್ ಎಲ್. ಶೆಟ್ಟಿ, ಮಾಜಿ ಅಧ್ಯಕ್ಷ ಸುಂದರ ಕೆ. ಶೆಟ್ಟಿ ಮತ್ತು ನಿರ್ಗಮನ ಅಧ್ಯಕ್ಷ ರಘುರಾಮ ಜಿ. ಶೆಟ್ಟಿ ಅವರ ಮಾರ್ಗದರ್ಶನ, ಸಲಹೆ ಸೂಚನೆಯೊಂದಿಗೆ ನಡೆದ ಈ ಸಭೆಯಲ್ಲಿ ಹೆಚ್ಚಿನ ಸದಸ್ಯ ಬಾಂಧವರು ಉಪಸ್ಥಿತರಿದ್ದರು.
Related Articles
Advertisement
ಭಾಸ್ಕರ್ ಟಿ. ಶೆಟ್ಟಿ ಕಳೆದ 21 ವರ್ಷಗಳಿಂದ ಭಿವಂಡಿ ಪರಿಸರದಲ್ಲಿ ಹೊಟೇಲು ವ್ಯವಸಾಯ ನಡೆಸುತ್ತಿರುವ ದೊಂಡೆರಂಗಡಿ ಭಾಸ್ಕರ ಟಿ. ಶೆಟ್ಟಿಯವರು ಭಿವಂಡಿಯಲ್ಲಿರುವ ದೀಪಕ್ ಹೊಟೇಲ್‌ನ ಮಾಲಕರು. ತನ್ನ ಹೊಟೇಲು ವ್ಯವಸಾಯದೊಂದಿಗೆ ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಭಿವಂಡಿ – ಕಲ್ಯಾಣ್ ಉಲ್ಲಾಸನಗರ, ಡೊಂಬಿವಲಿ, ಅಂಬರ್‌ನಾಥ್, ಬದ್ಲಾಪುರ, ಥಾಣೆ ಮಾತ್ರವಲ್ಲ ಮುಂಬಯಿ ಮಹಾನಗರದಲ್ಲೂ ಪ್ರಸಿದ್ಧರಾಗಿದ್ದಾರೆ.
ಬಂಟರ ಸಂಘ ಮುಂಬಯಿ ಇದರ ಆಡಳಿತ ಸಮಿತಿ ಸದಸ್ಯರಾಗಿರುವ ಇವರು ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಭಿವಂಡಿ ವಲಯದ ಸಂಘಟಕರಾಗಿ, ಪ್ರಾದೇಶಿಕ ಸಮಿತಿಯ ಸಂಚಾಲಕರಾಗಿ, ಪ್ರಸ್ತುತ ಶಿಕ್ಷಣ ಹಾಗೂ ಸಾಮಾಜ ಕಲ್ಯಾಣ ಉಪ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಣ್ಣರ ಬಿಂಬ, ಶ್ರೀ ಅಯ್ಯಪ್ಪ ಮಂದಿರ, ವಳಾದೇವಿ ಮಂದಿರ, ನಿತ್ಯಾನಂದ ಭಕ್ತವೃಂದ ಮೊದಲಾದ ಸಂಸ್ಥೆಗಳಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿದ ಭಾಸ್ಕರ ಶೆಟ್ಟಿಯವರು ಪ್ರಾಮಾಣಿಕ, ಸರಳ ಸಜ್ಜನ ಬಂಧು ಮಾತ್ರವಲ್ಲ ಮಿತಭಾಷಿ ಮತ್ತು ಪರೋಪಕಾರಿ ಎಂದೇ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಭಿವಂಡಿ ಪರಿಸರದ ತುಳು – ಕನ್ನಡಿಗರ ಮತ್ತು ಇತರ ಭಾಷಿಗರ ನಡುವಿನ ಸೇತು ಎಂದೇ ಖ್ಯಾತಿ ಪಡೆದಿರುವ ಇವರು, ಸ್ಥಳೀಯ ನಗರ ಸೇವಕರುಗಳಾದ ಸಂತೋಷ ಎಂ. ಶೆಟ್ಟಿ, ಮತ್ತು ಶಶಿಲತಾ ಎಸ್. ಶೆಟ್ಟಿ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ತೆರಿಗೆ ಇಲಾಖೆ, ನಗರ ಪಾಲಿಕೆ ಮೊದಲಾದ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ನಿಪುಣರು ಮಾತ್ರವಲ್ಲ ಛಲವಾದಿಯೂ ಹೌದು. ಇವರು ಮೂಲತಃ ಕುಕ್ಕುಜೆ ದೊಂಡೆರಂಗಡಿ ಅಡಿಮಾರು ತಿಮ್ಮಪ್ಪ ಶೆಟ್ಟಿ ಮತ್ತು ರತಿ ಟಿ. ಶೆಟ್ಟಿ ದಂಪತಿಯ ಪುತ್ರ. ತನ್ನ ಪ್ರಾಥಮಿಕ, ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು ಹುಟ್ಟೂರಲ್ಲೇ ಪೂರೈಸಿ ಹೆಚ್ಚಿನ ತುಳು-ಕನ್ನಡಿಗರಂತೆ 1985ರಲ್ಲಿ ಈ ಕರ್ಮಭೂಮಿಗೆ ಕಾಲಿರಿಸಿ, ಕಳೆದ 21 ವರ್ಷಗಳಿಂದ ಭಿವಂಡಿಯಲ್ಲೂ ವಿಶೇಷ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ದೀನ ದಲಿತರ ಬಗ್ಗೆ ಹೆಚ್ಚಿನ ಕಾಳಜಿ ಇರುವ ಭಾಸ್ಕರ ಶೆಟ್ಟಿ ಅವರು, ಹೊಟೇಲಿಗರ ಕಾರ್ಮಿಕರ ಮಕ್ಕಳಿಗೂ ಒಂದಿಷ್ಟು ವಿಶೇಷ ಸೌಲಭ್ಯವನ್ನು ಒದಗಿಸಿಕೊಡಬೇಕು, ಸಣ್ಣ ಪುಟ್ಟ ಹೊಟೇಲಿಗರ ಸಮಸ್ಯೆಗಳಿಗೂ ಸ್ಪಂದಿಸಬೇಕು, ಇನ್ನಷ್ಟು ಸದಸ್ಯರ ನೋಂದಣಿ ಪ್ರಕ್ರಿಯೆ ನಡೆಸುವಲ್ಲಿ ಸಂಸ್ಥೆಯು ಮುಂದಾಗಬೇಕು. ಅದಕ್ಕಾಗಿ ನೂತನ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.