Advertisement

ಭೀಮಾಶಂಕರ ಸ್ವಾಮಿಗಳ ಆರಾಧನೆ

05:57 PM Oct 09, 2017 | |

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ಸದ್ಗುರು ಭೀಮಾಶಂಕರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ರವಿವಾರ ನಸುಕಿನ ಜಾವ 1:30ರ ವೇಳೆ ಜರುಗಿದ ವೈದಿಕ ಬ್ರಾಹ್ಮಣರ ಪಾದಪೂಜೆ ಸಂದರ್ಭದಲ್ಲಿ ಜರುಗಿದ ಬಿಂದಗಿ ಮಹಾತ್ಮೆ ಇಂದಿನ ಯುಗದಲ್ಲಿ ವಿಜ್ಞಾನಕ್ಕೆ ಸವಾಲು ನೀಡುವಂತಿತ್ತು.

Advertisement

ಭೀಮಾಶಂಕರ ಮಠದ ಸಭಾಂಗಣದಲ್ಲಿ ಇಂದಿನ ಪೀಠಾಧಿಪತಿ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳ ನೇತೃತ್ವದಲ್ಲಿ ಜರಗುವ ವೈದಿಕ ಬ್ರಾಹ್ಮಣರ ಪಾದಪೂಜಾ ಸ್ಥಳದಲ್ಲಿ ರಂಗೋಲಿ ಬರೆದು ಅದರ ಮೇಲೆ ಬಿಂದಗಿ ಸ್ಥಾಪನೆ ಮಾಡಿ ಅದಕ್ಕೆ ವಿಧಿವಿಧಾನಗಳಿಂದ ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ವರ್ಷವು 81 ವೈದಿಕ ಬ್ರಾಹ್ಮಣರ ಪಾದ ಪೂಜೆ ಮಾಡಲಾುತು. ಪಾದಪೂಜೆಗೆ 15 ಬಿಂದಿಗೆ ನೀರು ಬಳಸಲಾಯಿತು.

ಪಾದಪೂಜೆಯ ನೀರು ಸ್ಥಾಪಿಸಲಾದ ಬಿಂದಗಿಯಲ್ಲಿ ಸಂಗ್ರಹಿಸಲಾಯಿತು. ಪಾದಪೂಜೆ ನಂತರ ಬಿಂದಿಗೆ ತಗೆದು ನೋಡಿದಾಗ ಬಿಂದಿಗೆ ತುಂಬದೆ 3 ಸೆಂಮೀ ಅಳತೆಯಷ್ಟು ಖಾಲಿಯಿತ್ತು. ಅಲ್ಲದೆ ಬಿಂದಗಿಯಿಂದ ಸ್ವಲ್ಪ ನೀರು ಕೆಳಗೆ ಚೆಲ್ಲಿರುವುದಿಲ್ಲ
ಮತ್ತು ಬಿಂದಗಿ ಸ್ಥಾಪನೆ ಮಾಡುವ ಪೂರ್ವದಲ್ಲಿ ಹಾಕಿದ ರಂಗೋಲಿ ಅಳಕಿರದಿರುವುದು ಸಿಂದಗಿ ಬಿಂದಗಿ ಮಹಾತ್ಮೆಯಾಗಿದೆ.

ಮಣ್ಣಿನ ತಯಾರಾದ ಮಡಿಕೆಯ ಮೇಲೆ ಗುರುಗಳ ನಾಮಾವಳಿಗಳನ್ನು ಬರೆಯಲಾಗಿರುತ್ತದೆ. ಪ್ರತಿಷ್ಠಾಪಿಸುವ ಸ್ಥಳದಲ್ಲಿ ರಂಗೋಲಿ ಬಿಡಿಸಲಾಗಿರುತ್ತದೆ.  ರಂಗೋಲಿ ಮೇಲೆ ಬಿಂದೆಗೆ ಪ್ರತಿಷ್ಠಾಪಿಸಲಾಗುತ್ತದೆ. ಮಣ್ಣಿನ ಬಿಂದಿಗೆ ಮೇಲೆ ಮಣ್ಣಿನ ಮುಚ್ಚಳಿಕೆ ಮುಚ್ಚಿ ಅದಕ್ಕೆ ಒಂದು ರಂದ್ರ ಕೊರೆದು ಪಾದಪೂಜೆ ಮಾಡಿದ ನೀರು ಬಿಂದಿಗೆಯಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಶ್ರೀಮಠದ ಹಿಂದಿನ ಗುರುಗಳ ದಿವ್ಯ ಶಕ್ತಿಯಿಂದ ಈ ಬಿಂದಿಗೆ ತುಂಬುವುದಿಲ್ಲ. ಬಿಂದಿಗೆ ಖಾಲಿ ಉಳಿಯುತ್ತದೆ.

ಬಿಂದಿಗೆ ಕೆಳಗೆ ಹಾಕಿರುವ ರಂಗೋಲಿ ಅಳಕಿರುವುದಿಲ್ಲ. ಇದು ಗುರುಗಳ ಪವಾಡ ಎಂದು ಈಗಿನ ಪೀಠಾಧಿಪತಿ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದರು. ಆರಾಧನಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ಪಕ್ಕದ ಮಹಾರಾಷ್ಟ್ರ, ತಮಿಳನಾಡು ಹಾಗೂ ಆಂಧ್ರಪ್ರದೇಶ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳು ಭೀಮಾಶಂಕರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಲು ಮತ್ತು ಸಿಂದಗಿ ಬಿಂದಗಿ ಮಹಾತ್ಮೆಯನ್ನು ಕಣ್ಣಾರೆ ವೀಕ್ಷಿಸಲು ಆಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next