ನವ ದೆಹಲಿ: ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಖಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು(ಬುಧವಾರ, ಮೇ 12 ) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಯುಯು ಲಲಿತ್ ಹಾಗೂ ಕೆ. ಎಮ್. ಜೋಸೆಫ್ ಅವರಿದ್ದ ದ್ವೀ ಸದಸ್ಯ ನ್ಯಾಯಪೀಠವು ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ನವ್ಲಖಾ ಅವರ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ ; ಮಹಿಳಾಪರ ಬಜೆಟ್ ಎನ್ನುವುದು ಬಾಯಿಮಾತಿಗಷ್ಟೇ ಸೀಮಿತವೇ?: ಸಿದ್ದರಾಮಯ್ಯ
ಪ್ರಕರಣಕ್ಕೆ ಸಂಬಮಧಿಸಿದಂತೆ ನವ್ಲಖಾ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿಯ ವಿಚಾರಣೆಗೆ ಮಾರ್ಚ್ 26 ಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಇನ್ನು, ಪ್ರಕರಣ ಸಂಬಂಧ ಮಾರ್ಚ್ 3 ರಂದು ಉನ್ನತ ನ್ಯಾಯಾಲಯವು ಎನ್ ಐ ಎ ಯಿಂದ ಪ್ರತಿಕ್ರಿಯೆ ಕೋರಿತ್ತು, ನಿಗದಿತ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ ಎಂದು ಆರೋಪಿಸಿತ್ತು. ಅವರ ವಿರುದ್ಧ ಎಫ್ ಐ ಆರ್ ನನ್ನು 2020 ರ ಜನವರಿಯಲ್ಲಿ ಮರು ನೋಂದಾಯಿಸಲಾಯಿತು, ಮತ್ತು ನವ್ಲಖಾ ಕಳೆದ ವರ್ಷ ಏಪ್ರಿಲ್ 14 ರಂದು ಎನ್ ಐ ಎ ಮುಂದೆ ಶರಣಾಗಿದ್ದರು.
ಏಪ್ರಿಲ್ 25 ರವರೆಗೆ 11 ದಿನಗಳ ಕಾಲ ಗೌತಮ್ ನವ್ಲಖಾ ಎನ್ ಐ ಎ ವಶದಲ್ಲಿದ್ದರು, ಮತ್ತು ಅಂದಿನಿಂದ ನವೀ ಮುಂಬಯಿಯ ತಾಲೋಜ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ ; ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವ ರುಚಿ ಸೋಯ ತೆಕ್ಕೆಗೆ..!?