ನವದೆಹಲಿ: ಜನಪ್ರಿಯ ಆನ್‌ಲೈನ್ ಪೇಮೆಂಟ್ ಆ್ಯಪ್ ಆದ ಭೀಮ್‌ನಲ್ಲಿದ್ದ 70 ಲಕ್ಷ ಗ್ರಾಹಕರ ಖಾಸಗಿ ಹಾಗೂ ಹಣಕಾಸು ಮಾಹಿತಿಯು ಸೋರಿಕೆಯಾಗಿದೆ ಎಂದು ಕೆಲಮೂಲಗಳು ಹೇಳಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತಯಾರಿಸಿರುವ ಭೀಮ್ ಆ್ಯಪ್‌ನ ಲಕ್ಷಾಂತರ ಬಳಕೆದಾರರ ಖಾಸಗಿ ಮಾಹಿತಿಗಳನ್ನು “ಅಮೆಜಾನ್ ವೆಬ್ ಸರ್ವೀಸಸ್ ಎಸ್2 ಬಕೆಟ್’ ಎಂಬ ಸರ್ವರ್‌ನಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ, ಅದರಲ್ಲಿನ ಮಾಹಿತಿ ಸಂರಕ್ಷಣೆಗೆ ಯಾವುದೇ ಶಿಷ್ಟಾಚಾರ ಪಾಲಿಸಲಾಗಿಲ್ಲ. ಹಾಗಾಗಿ, ಹ್ಯಾಕರ್‌ಗಳು ಆ ಸರ್ವರ್ ಪ್ರವೇಶಿಸಿ ಅದರಲ್ಲಿದ್ದ ಮಾಹಿತಿಗಳನ್ನು ಕದ್ದಿದ್ದಾರೆ ಎಂದು ವಿಪಿಎನ್ ಮೆಂಟರ್
ಎಂಬ ಇಸ್ರೇಲ್ ಮೂಲದ ಸೈಬರ್ ಭದ್ರತಾ ಸಂಸ್ಥೆ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಕೇಂದ್ರಸರ್ಕಾರ ದಿಂದ ಯಾವುದೇ ಪ್ರಕಟಣೆ ಅಥವಾ ಸ್ಪಷ್ಟನೆ ಹೊರಬಿದ್ದಿಲ್ಲ.