Advertisement

ಮೊಹರಂ-ಪೀರ್‌ಗಳ ಮೆರವಣಿಗೆ

03:04 PM Sep 15, 2019 | Naveen |

ಬೀದರ: ಚಿಕ್ಕಪೇಟ್‌ನಲ್ಲಿ ಶುಕ್ರವಾರ ಮೊಹರಂ ಹಬ್ಬ ನಿಮಿತ್ತ ಪೀರ್‌ಗಳ ಮೆರವಣಿಗೆ ನಡೆಯಿತು. ಗ್ರಾಮದ ಎಲ್ಲ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಶುಕ್ರವಾರ ರಾತ್ರಿ ಹಬ್ಬ ನಿಮಿತ್ತ ಏರ್ಪಡಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಿಗೆ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.

Advertisement

ಈ ವೇಳೆ ಗ್ರಾಮ ಪಂಚಾಯತ ಸದಸ್ಯ ವೈಜನಾಥ ಕಾಂಬಳೆ ಮಾತನಾಡಿ, 25 ವರ್ಷಗಳಿಂದ ಎಲ್ಲ ಸಮುದಾಯದ ಜನರು ಸೇರಿ ಮೊಹರಂ ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ದೊರೆಯುತ್ತಿದ್ದು, ಮುಂದೆಯೂ ಕೂಡ ಎಲ್ಲರ ಸಹಕಾರದಿಂದ ಹಬ್ಬ ಆಚರಣೆ ಮಾಡಲಾಗುವುದು ಎಂದರು. ಗ್ರಾಮ ಪಂಚಾಯತ ಸದಸ್ಯ ಸಿದ್ರಾಮ್‌ ರಾಂಪೂರೆ ಮಾತನಾಡಿದರು.

ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ಹಾಡುಗಾರರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನರಸಪ್ಪಾ ಇರಕ್ಕಪಳ್ಳಿ ಅವರಿಗೆ 30 ಗ್ರಾಂ ಬೆಳ್ಳಿ ಕಡಗ ನೀಡಿ ಗೌರವಿಸಲಾಯಿತು. ಎರಡನೇ ಸ್ಥಾನ ಪಡೆದ ಸೂಜೀತ್‌ ಚಾಂಬೋಳ್‌ ಅವರಿಗೆ 20 ಗ್ರಾಂ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.

ಗ್ರಾಮದ ಹಿರಿಯ ಮುಖಂಡರಾದ ಶಾಂತಪ್ಪಾ ಕಾಂಬಳೆ, ಪೊಲೀಸ್‌ ಪಾಟೀಲ ಜಗನ್ನಾಥರಾವ್‌, ಹಣಮಂತರಾವ್‌ ಪಾಟೀಲ, ಅಜೀಜ್‌ ಮಿಯ್ನಾ, ಮುಲ್ತಾನಿ ದೊಡ್ಡಿ, ಚಂದ್ರಪ್ಪಾ ಕಾಂಬಳೆ, ಜಾಫರ್‌ ಮಿಯ್ನಾ, ಎಂ.ಪಿ.ಮುದಾಳೆ, ಶಂಕರ ಪೊಲೀಸ್‌ ಪಾಟೀಲ, ಶರಣಪ್ಪಾ ಕಾಂಬಳೆ, ಲಕ್ಷ್ಮಣ ಕಾಂಬಳೆ, ಲೋಕೆಶ ಸತ್ಪಾಲ್, ಪವನ ಚಾಂಬೋಳ್‌, ವೀರಶೆಟ್ಟಿ ಸಿಕ್ಕರಖಾನಿ, ಲವಕುಶ, ಇಸ್ಮಾಯಿಲ್, ಶೀವಕುಮಾರ ಕಾಂಬಳೆ, ಶಿವಕುಮಾರ ಮುದಾಳೆ, ತುಕಾರಾಮ್‌ ಧನರಾಜ ಕಾಶೀನಾಥ ಕಾಂಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next