Advertisement

ಯುಗಾದಿ ದಿನ ವರ್ಷದ ಭವಿಷ್ಯ ಕೇಳಿದ ಜನರು

03:27 PM Apr 08, 2019 | Team Udayavani |

ಬೀದರ: ಯುಗಾದಿ ಹಬ್ಬ ನಿಮಿತ್ತ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವರ್ಷದ ಮುನ್ನೋಟ  ‘ಪಂಚಾಂಗ’ ಸಾರ ತಿಳಿದುಕೊಳ್ಳಲು ಸಾರ್ವಜನಿಕರು ಮುಂದಾಗಿದ್ದರು.

Advertisement

ವರ್ಷದ ಗೃಹಗತಿಗಳು, ನಕ್ಷತ್ರಗಳ ಬಲಾಬಲ, ವರ್ಷದ ಅಧಿಪತಿ ಯಾರು, ಆತನ ಆಳ್ವಿಕೆ ಹೇಗಿರುತ್ತದೆ. ಆತ ಯಾವ ಕ್ಷೇತ್ರದ ಮೇಲೆ ಹೇಗೆ ಪ್ರಭಾವ ಬೀರಲಿದ್ದಾನೆ. ಕೃಷಿ, ಲೋಕ, ವ್ಯಾಪಾರದ ಈ ವರ್ಷ ಹೇಗಿರುತ್ತದೆ. ಯಾವ ರಾಶಿ ಅವರಿಗೆ ಉತ್ತಮ, ಯಾರಿಗೆ ಸಾಧಾರಣ ಎಂದು ಜನರು ಸರತಿ ಸಾಲಿನಲ್ಲಿ ಕುಳಿತು ತಿಳಿದುಕೊಂಡರು.

ಬೀದರ್‌ ತಾಲೂಕಿನ ಸಿರ್ಸಿ ಸೇರಿದಂತೆ ವಿವಿಧ ಗ್ರಾಮಗಳ ದೇವಸ್ಥಾನಗಳಲ್ಲಿ ಕುಳಿತು ಸಾರ್ವಜನಿಕರು ಪಂಚಾಗ ಕೇಳಿದರು. ಅಲ್ಲದೆ, ಔರಾದ ತಾಲೂಕಿ ತೆಂಗಪೂರ, ಯನಗುಂದಾ, ಮಾಳೆಗಾಂವ, ಚನ್ನೆಗಾಂವ, ಭಾಲ್ಕಿ ತಾಲೂಕಿನ ನಾವದಗಿ, ಖಟಕಚಿಂಚೋಳಿ, ಕೊಣಮೇಣಕುಂದಾ, ಕೇಸರ್‌ ಜಾವಳಗಾ, ಕುರುಬಖೇಳಗಿ, ಹುಮನಾಬಾದ ತಾಲೂಕಿನ ಮಾಣಿಕನಗರ ಸೇರಿದಂತೆ ಇತರೆ ಗ್ರಾಮಗಳು ಹಾಗೂ ಬಸವಕಲ್ಯಾಣದ ಯರಬಾಗ ಗ್ರಾಮದಲ್ಲಿ ಹೆಚ್ಚು ಜನರು ಪಂಚಾಗದ ಸಾರ ತಿಳಿದುಕೊಂಡರು.

ಯುಗಾದಿ ಹಬ್ಬದಂದು ಪಂಚಾಗ ಹೇಳುವವರು ಜನರಿಂದ ಹಣ ಬೇಡಿಕೆ ಇಡುವುದಿಲ್ಲ. ಆದರೆ, ಸಂಪ್ರದಾಯದ ಪ್ರಕಾರ ಪಂಚಾಗ ಕೇಳುವವರು ಅಲ್ಪ ಹಣವನ್ನು ಪಂಚಾಗದ ಮೇಲೆ ಇರಿಸಿ ಪಂಚಾಗ ಕೇಳುವುದು ವಾಡಿಕೆಯಾಗಿದೆ. ಹಬ್ಬದ ದಿನದಿಂದ ಸತತ ಹತ್ತಾರು ದಿನಗಳ ಕಾಲ ಯರಬಾಗ ಗ್ರಾಮದ ಶ್ರೀ ಚನ್ನವೀರಯ್ನಾ ಸ್ವಾಮಿಗಳಿಂದ ಸಾವಿರಾರುೂ ಜನರು ಪಂಚಾಗ ಕೇಳಲು ದೂರದ ಊರುಗಳಿಂದ ಆಗಮಿಸುತ್ತಾರೆ. ಅಲ್ಲದೆ, ನೆರೆಯ ರಾಜ್ಯದ ಜನರು ಕೂಡ ಪಂಚಾಗ ಕೇಳಲು ಇಲ್ಲಿಗೆ ಆಗಮಿಸುತ್ತಾರೆ. ಅವರ ಪ್ರಕಾರ, ಉತ್ತರ ಕರ್ನಾಟಕ ಭಾಗದ ರೈತರಿಗೆ ಹೊಸ ವರ್ಷ ಉತ್ತಮ ವರ್ಷ ವಾಗಲಿದೆ.

ಉತ್ತಮ ಮಳೆ, ಬೆಳೆ ಬೆಳೆಯುವ ಲಕ್ಷಣಗಳು ಇವೆ. ಕೆಲ ಕಡೆಗಳಲ್ಲಿ ಅತಿವೃಷ್ಟಿಯಾದರೆ, ಕೆಲವು ಕಡೆಗಳಲ್ಲಿ ಅನಾವೃಷ್ಟಿ ಸಂಭವಿಸಬಹುದು. ಆದರೆ, ರೈತರಿಗೆ ಉತ್ತಮ ಲಾಭ ಬರುವ ನಿರೀಕ್ಷೆಗಳು ಹೆಚ್ಚಿವೆ ಎಂದು ಭವಿಷ್ಯ ನುಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next