Advertisement

ತಂತ್ರಜ್ಞಾನ ಬೆಳೆದಂತೆ ದುರುಪಯೋಗ ಹೆಚ್ಚಳ

03:34 PM Dec 13, 2019 | Team Udayavani |

ಬೀದರ: ಬ್ಯಾಂಕ್‌ಗಳನ್ನು ಶಾಖೆಗಳಿಂದ ಮನೆಬಾಗಿಲಿಗೆ ತಂದು ನಿಲ್ಲಿಸುವಲ್ಲಿ ತಂತ್ರಜ್ಞಾನದ ಉಪಯೋಗ ವ್ಯಾಪಿಸಿದೆ. ಆದರೆ, ಬ್ಯಾಂಕ್‌ ವ್ಯವಹಾರದಲ್ಲಿ ಸರಳತೆ ಹೆಚ್ಚಿದಂತೆ ಅದರ ದುರುಪಯೋಗವೂ ಹೆಚ್ಚಾಗಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ವಿಜಯಕುಮಾರ ಪಾಟೀಲ ಹೇಳಿದರು.

Advertisement

ನಗರದ ನೌಬಾದ್‌ನ ಡಾ| ಗುರುಪಾದಪ್ಪಾ ನಾಗಮಾರಪಳ್ಳಿ ಸಹಕಾರ ಗ್ರಾಮೀಣಾಭಿವೃದ್ಧಿ ಅಕಾಡೆಮಿಯಲ್ಲಿ ಧಾರವಾಡ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಶಿರಸಿ ಕಾರವಾರ ಮತ್ತು ಬೀದರ ಜಿಲ್ಲೆಗಳ ಡಿಸಿಸಿ ಬ್ಯಾಂಕಿನ ಅಧಿಕಾರಿಗಳಿಗಾಗಿ ನಡೆದ ಸೈಬರ್‌ ಅಪರಾಧ ಮತ್ತು ವಂಚನೆ ತಡೆಗಟ್ಟುವಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ವಂಚಕರಿಗೆ ಸುಲಭವಾಗಿ ಹಣ ವಂಚಿಸುವ ದಾರಿಯಾಗಿ ಇದು ಮಾಪಾರ್ಡಡಾಗಿದ್ದು, ಗ್ರಾಹಕರು ಎಚ್ಚರ ವಹಿಸಬೇಕಿದೆ ಎಂದರು. ಕಂಪ್ಯೂಟರ್‌ ಬಳಕೆಯನ್ನು ಸುರಕ್ಷಿತವಾಗಿ ಮಾಡಲು ಆರ್ಥಿಕ ವ್ಯವಹಾರಗಳನ್ನು ಭದ್ರವಾಗಿಡಲು ಮತ್ತು ಬ್ಯಾಂಕಿಂಗ್‌ ಅನ್ನು ವಿಶ್ವಾಸಾರ್ಹವಾಗಿಡಲು ತಂತ್ರಜ್ಞಾನದ ಬಗ್ಗೆ ತರಬೇತಿಗಳು ಆವಶ್ಯಕವಾಗಿವೆ. ಬ್ಯಾಂಕ್‌ಗಳಿಗೆ ತಂತ್ರಜ್ಞಾನದ ಮೂಲಕ ವಂಚಿಸಲು ಹೊರಗಿನ ಹ್ಯಾಕರ್ ಅಥವಾ ಒಳಗಿನ ಸಿಬ್ಬಂದಿಗಳ ದುರಾಸೆಗಳಿಂದ ಮಾತ್ರ ಸಾಧ್ಯವಿದೆ. ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್‌ ವ್ಯವಹಾರ ಅತ್ಯಂತ ಸುರಕ್ಷಿತವಾಗಿದ್ದು ಗ್ರಾಹಕರು ತಮ್ಮ ಖಾಸಗಿ ವಿವರಗಳನ್ನು ಹಂಚಿಕೊಂಡಾಗ ಮಾತ್ರ ವಂಚಿಸಲು ಸಾಧ್ಯವಿದೆ. ಇದನ್ನು ತಡೆಯಲು ಗ್ರಾಹಕರಿಗೆ ಬ್ಯಾಂಕ್‌ ಸಿಬ್ಬಂದಿಗಳು ಅರಿವು ಮೂಡಿಸಬೇಕೆಂದರು.

ಡಿಸಿಸಿ ಬ್ಯಾಂಕಿನ ಸಿಇಒ ಮಹಾಜನ ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಬ್ಯಾಂಕಿನಲ್ಲಿ ಕಂಪ್ಯೂಟರ್‌ ಅಳವಡಿಸಿದ ಹೆಮ್ಮೆ ಬೀದರದ್ದಾಗಿದೆ. ಎಲ್ಲಾ ಬ್ಯಾಂಕ್‌ ಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಆದರೆ, ಕಂಪ್ಯೂಟರ್‌ ಬಳಕೆಯಿಂದ ಬ್ಯಾಂಕ್‌ ವ್ಯವಹಾರ ಸುಲಭವಾಗಿದೆ. ಆದರೆ, ಗ್ರಾಹಕರಲ್ಲಿ ತಿಳಿವಳಿಕೆಯ ಕೊರತೆ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯಗಳಿಂದ ವಂಚನೆ ಪ್ರಕರಣಗಳು ನಡೆಯುತ್ತಿದ್ದು ಎಲ್ಲರೂ ಜಾಗೃತರಾದಾಗ ಇದನ್ನು ತಡೆಯಬಹುದು ಎಂದು ತಿಳಿಸಿದರು.

ತರಬೇತಿ ಕೇಂದ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್‌ ಸಿಬ್ಬಂದಿಗಳಲ್ಲಿ ಗ್ರಾಹಕ ಸ್ನೇಹಿ ನಡುವಳಿಕೆಗೆ ತರಬೇತಿ ಆವಶ್ಯಕವಾಗುತ್ತದೆ. ಇದಕ್ಕಾಗಿ ನಬಾರ್ಡ್‌ ಉತ್ತಮ ವ್ಯವಸ್ಥೆ ನಿರ್ಮಾಣಕ್ಕಾಗಿ ತರಬೇತಿಗಳನ್ನು ಆಯೋಜಿಸುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

Advertisement

ಸಂಪನ್ಮೂಲ ವ್ಯಕ್ತಿ ಎಸ್‌.ಜಿ. ಕುಲಕರ್ಣಿ ಡಿಸಿಸಿ ಬ್ಯಾಂಕಿನ ಸಾಧನೆಗಳನ್ನು ತಿಳಿಸಿದರು. ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಅವರು ಬ್ಯಾಂಕಿನ ಪ್ರಗತಿಯ ಪಕ್ಷಿನೋಟ ನೀಡಿದರು.

ಪ್ರೊ| ರವೀಂದ್ರ ಪಾಟೀಲ, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಾಮರಾವ್‌ ಏಕಬೋಟೆ ಉಪಸ್ಥಿತರಿದ್ದರು. ತನ್ವೀರ ರಜಾ ಸ್ವಾಗತಿಸಿದರು. ನಾಗಶಟ್ಟಿ ಘೋಡಂಪಳ್ಳಿ ನಿರೂಪಿಸಿದರು. ಮಹಾಲಿಂಗ ಕಟಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next