ಬೀದರ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜರುಗಿದ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಯೋಗ ಸ್ಪರ್ಧೆಯಲ್ಲಿ ವಿವಿಧ ಭಂಗಿಗಳ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿದ 28 ಮಕ್ಕಳು ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಭಾಗೀಯ ಸ್ಪರ್ಧೆಯಲ್ಲಿ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಿಂದ 180 ಮಕ್ಕಳು ಭಾಗವಹಿಸಿದ್ದರು. ವಿಭಾಗ ಮಟ್ಟದ ಸ್ಪರ್ಧೆಯಿಂದ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಮಕ್ಕಳಲ್ಲಿ ಬೀದರ ಜಿಲ್ಲೆಯವರು 14 ಜನ ಇದ್ದಾರೆ. ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳ ಯೋಗ ಸ್ಪರ್ಧೆ ಅ.19ರಂದು ಶನಿವಾರ ಬೆಳಗ್ಗೆ 10:30ಕ್ಕೆ ಇಲ್ಲಿಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ. ಕಲಬುರಗಿ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರು ವಿಭಾಗದಿಂದ ಒಟ್ಟು 180 ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು: ಬಾಲಕರ ವಿಭಾಗ(ಪ್ರೌಢ ಶಾಲೆ): ಶಶಾಂಕ ಶರಣಬಸಪ್ಪ ಕಲಬುರಗಿ, ಶಿವಶರಣ ಭೀಮಪ್ಪ ಶಹಾಪುರ, ಭೀಮಾಶಂಕರ ಬಾಲಪ್ಪ ಶಹಾಪುರ, ತೋಟೆಂದ್ರ ಬಸವರಾಜ ಶಹಾಪುರ, ಮಲ್ಲಿಕಾರ್ಜುನ ಮಹಾದೇವಪ್ಪ ಕಲಬುರಗಿ, ಪ್ರಕಾಶ ದೇವಿಂದ್ರಪ್ಪ ಶಹಾಪುರ, ಶಿವಾನಂದ ಕಾಶಪ್ಪ ಸೇಡಂ.
ಬಾಲಕಿಯರ ವಿಭಾಗ (ಪ್ರೌಢ): ದಿವ್ಯಾ ರಾಜಕುಮಾರ ಹುಮನಾಬಾದ್, ಬಸಮ್ಮ ಹೊಸಳ್ಳಿ ಕೊಪ್ಪಳ, ಪ್ರಭಾವತಿ ಹಳ್ಳದ್ ಕೊಪ್ಪಳ, ಭವಾನಿ ಜಗದೇವಪ್ಪ ಸುರಪುರ, ಪಲ್ಲವಿ ರಾಮಣ್ಣ ಸುರಪುರ, ಪಲ್ಲವಿ ಶಿವರಾಜ ಹುಮನಾಬಾದ್, ಮೇಘಾ ಸಂಗಪ್ಪ ಶಹಾಪುರ. ಬಾಲಕರ (ಪ್ರಾಥಮಿಕ) ವಿಭಾಗ: ಆಶೀಷ್ ಸಿದ್ದಪ್ಪ ಹುಮನಾಬಾದ್, ಭೀಮರಾವ್ ರುದ್ರಪ್ಪ ಶಹಾಪುರ,
ಶಶಾಂಕ ಸತೀರ್ಶ ಹುಮನಾಬಾದ್, ಅಣವೀರ ರಾಚಣ್ಣ ಆಳಂದ, ಮಲ್ಲಪ್ಪ ನರಸಪ್ಪ ಬೀದರ್, ಬದ್ರಿನಾಥ ನಾಗಯ್ಯ ಹುಮನಾಬಾದ್, ಸಮರ್ಥ ಮೋಹನ ಹುಮನಾಬಾದ.
ಬಾಲಕಿಯರ (ಪ್ರಾಥಮಿಕ) ವಿಭಾಗ: ಅಂಕಿತಾ ಆನಂದರಡ್ಡಿ ಹುಮನಾಬಾದ್, ಈರಮ್ಮ ಘಾಳೆಪ್ಪ ಬೀದರ್, ಗಂಗಮ್ಮ ಉಮಾಕಾಂತ ಆಳಂದ, ವೈಷ್ಣವಿ ಬಸವರಾಜ ಕಲಬುರಗಿ, ಐಶ್ವರ್ಯ ಬೆಳಪ್ಪ ಕಲಬುರಗಿ, ಈಶ್ವರಿ ಚಂದ್ರಶೇಖರ ಹುಮನಾಬಾದ, ಕಾವೇರಿ ಪರಶುರಾಮ ಶಹಾಪುರ.