Advertisement
ನಗರದ ಶಾಹೀನ್ ಪದವಿಪೂರ್ವ ಕಾಲೇಜಿನ ಅಲ್ ಆಜೀಜ್ ಕಾನರೆನ್ಸ್ ಹಾಲ್ನಲ್ಲಿ ಮಂಗಳವಾರ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಉರ್ದು ಪತ್ರಿಕೋದ್ಯಮ ಕುರಿತು ನಡೆದ ‘ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿಗಳು’ ವಿಷಯದ ಕುರಿತ ಕಲಬುರಗಿ ವಿಭಾಗ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಬೆಂಗಳೂರಿನ ಕರ್ನಾಟಕ ಮುಸ್ಲಿಂ ಪತ್ರಿಕೆಯ ಸಂಪಾದಕ ಸೈಯ್ಯದ್ ತನ್ವೀರ್ ಅಹ್ಮದ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯಾದಂತೆಲ್ಲ ಸುದ್ದಿವಾಹಿನಿಗಳ ಚಿತ್ರಣವೂ ಬದಲಾಗುತ್ತಿದೆ. ಇಂದಿನ ದಿನಗಳಲ್ಲಿ ಮೊಬೈಲ್ ಮೂಲಕ ಯೂಟ್ಯೂಬ್ ಚ್ಯಾನಲ್ ನಡೆಸಲು ಸಾಧ್ಯವಿದೆ. ಯುವಜನತೆ ಇದರ ಸದುಪಯೋಗ ಪಡೆಯಬೇಕು ಎಂದರು. ಪತ್ರಕರ್ತರು ಜನತೆಯ ನಂಬಿಕೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಿದೆ. ಸುದ್ದಿವಾಹಿನಿಗಳು ಹೊಸ ಹಾಗೂ ಜನತೆಗೆ ಉಪಯೋಗಕರವಾದ ಸುದ್ದಿಗಳನ್ನು ಪ್ರಸಾರ ಮಾಡಲು ಯತ್ನಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಬಿಬಿಸಿ ಉರ್ದು ನಿವೃತ್ತ ವರದಿಗಾರ ಮಕ್ಬುಲ್ ಅಹ್ಮದ್ ಸಿರಾಜ್ ಮಾತನಾಡಿ, ಪತ್ರಿಕೆಗಳ ಏಳ್ಗೆಗಾಗಿ ಪತ್ರಕರ್ತರು ಪುರಾತನ ಸಂಪ್ರದಾಯಗಳನ್ನು ಬಿಟ್ಟು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಉತ್ತಮ ತರಬೇತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಜ್ಞಾನಕ್ಕಿಂತ ಶಕ್ತಿಶಾಲಿ ಅಸ್ತ್ರ ಇನ್ನೊಂದು ಇರುವುದಿಲ್ಲ. ಹಾಗಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸತನ್ನು ತಿಳಿಯಲು ಯತ್ನಿಸಬೇಕು. ತಾವು ಮಾಡುವ ಸುದ್ದಿಗಳು ಸತ್ಯ ಮತ್ತು ನಿಷ್ಪಕ್ಷಪಾತತೆಯಿಂದ ಕೂಡಿರುವಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಜನರು ಅನಿವಾರ್ಯವಾಗಿ ಬೇರೆ ಪತ್ರಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಸಲಹೆ ನೀಡಿದರು.
ವಾಹಿನಿಯೊಂದರ ನಿರೂಪಕ ಸೈಯ್ಯದ್ ಅಹ್ಮದ್ ಗಿಲಾನಿ, ವಿಜಯಪುರದ ಡೇಲಿ ಸಲಾರ್ ಪತ್ರಿಕೆಯ ಹಿರಿಯ ವರದಿಗಾರ ರಫಿ ಭಂಡಾರಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ, ಅಖೀಲ ಭಾರತ ಪತ್ರಿಕಾ ಮಂಡಳಿಯ ಸದಸ್ಯ ಎಂ.ಎ.ಮಾಜೀದ್, ಶಾಹೀದ್ ಖಾಜಿ, ಹಿರಿಯ ಪತ್ರಕರ್ತರಾದ ಖಾಜಿ ಅಲಿಯೋದ್ದಿನ್, ವಿವಿಧ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ಮಹ್ಮದ್ ಸಾಜೀದ್ ಪಾಶಾ ಸ್ವಾಗತಿಸಿ ನಿರೂಪಿಸಿದರು. ಇದೇ ವೇಳೆ ಉರ್ದು ಭಾಷೆಯ ಏಳ್ಗೆಗೆ ಶ್ರಮಿಸಿದವರು ಹಾಗೂ ಪತ್ರಕರ್ತರಿಗೆ ಅಕಾಡೆಮಿಯಿಂದ ಸನ್ಮಾನಿಸಲಾಯಿತು.