Advertisement

ಜನಸಂಖ್ಯೆ ಹೆಚ್ಚಳದಿಂದ ಜಟಿಲ ಸಮಸ್ಯೆ

01:02 PM Jul 13, 2019 | Naveen |

ಬೀದರ: ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಬಡತನ, ನಿರುದ್ಯೋಗ, ಭಿಕ್ಷಾಟನೆ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಭಾರತೀಯ ಕುಟುಂಬ ಕಲ್ಯಾಣ ಯೋಜನೆ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಹೇಳಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.

ಜನಸಂಖ್ಯಾ ದಿನ ಆಚರಿಸುವುದು ಸಂತೋಷದ ವಿಷಯವಲ್ಲ. ಜನಸಂಖ್ಯೆ ಹೆಚ್ಚಳದಿಂದ ಆಗಬಹುದಾಗ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಬೇಕು. ಜನಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಯುವ ಜನರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯಕೂಡ ನಡೆಯಬೇಕು. ಜನ ಜಾಗೃತಿಯ ಆಂದೋಲನ ನಡೆದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಜನಸಂಖ್ಯೆ ನಿಂಯತ್ರಣ ಸಾಧ್ಯವಾಗಬಹುದು ಎಂದು ಹೇಳಿದರು.

ಜನ ಸಂಖ್ಯೆ ನಿಯಂತ್ರಣ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ತಾಯಿಯರಿಗೆ ಬಹುಮಾನ ನೀಡುವುದು. ಧನಸಹಾಯ ನೀಡುವುದು ಹಾಗೂ ಆದರ್ಶ ಮಾತೆಯರು ಎಂಬ ಬಿರುದು ನೀಡುವುದರ ಮೂಲಕ ಜನಸಂಖ್ಯಾ ನಿಯಂತ್ರಣ ಮಾಡಲು ಪ್ರಯತ್ನಿಸಿದ್ದೇವೆ. ಇಂದು ಎಫ್‌ಪಿಎಐ ದೇಶದಾದ್ಯಂತ 41 ಶಾಖೆಗಳನ್ನು ಹೊಂದಿದೆ. ಇಂದಿನ ಯುವಕರು ಈ ಶಾಖೆಯ ಸದುಪಯೋಗ ಪಡೆದುಕೊಂಡು ಜನಸಂಖ್ಯಾ ನಿಯಂತ್ರಿಸಲು ಪ್ರಯತ್ನಿಸಬೇಕು. ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ| ಕಲ್ಪನಾ ದೇಶಪಾಂಡೆ ಮಾತನಾಡಿ, ಜನಸಂಖ್ಯೆ ನಿಯಂತ್ರಿಸುವ ಸಲುವಾಗಿ ಹೆಣ್ಣು ಭ್ರೂಣಹತ್ಯೆಗಳು ನಡೆಯುತ್ತಿವೆ. ನಮ್ಮ ದೇಶದ ಭೂಮಿ ದುಪ್ಪಟ್ಟು ಆಗಲಿಲ್ಲ. ಸಂಪನ್ಮೂಲ ದುಪ್ಪಟ್ಟಾಗಲಿಲ್ಲ. ಆದರೆ ಜನಸಂಖ್ಯೆ ಮಾತ್ರ ಎರಡರಷ್ಟು ಮೂರರಷ್ಟು ಹೆಚ್ಚಾಗುತ್ತಲೇ ಇದೆ. ಈ ಕುರಿತು ನಮ್ಮ ಮನಸ್ಥಿತಿ ಬದಲಾಗಬೇಕಿದೆ. ಇಂದಿಗೂ ಕೂಡ ಪ್ರತೀ ಒಂದು ನಿಮಿಷಕ್ಕೆ ನಮ್ಮ ದೇಶದಲ್ಲಿ ಸುಮಾರು 40 ಮಕ್ಕಳು ಜನಿಸುತ್ತಿವೆ. ಇದು ಹೀಗೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಭಾರತ ದೇಶ ಚೀನಾ ದೇಶವನ್ನು ಹಿಂದಿಕ್ಕಲಿದೆ. ಅಲ್ಲದೆ ಭಾರತದ ಆರ್ಥಿಕ ಸ್ಥಿತಿ ಅಧೋಗತಿಗಿಳಿಯಲಿದೆ. ದೇಶದಲ್ಲಿ ಹಸಿವಿನಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಹೇಳಿದರು.

Advertisement

ವಿನಾಯಕ ಕುಲಕರ್ಣಿ, ಶ್ರೀನಿವಾಸ ಬಿರಾದಾರ ಜನಸಂಖ್ಯೆ ನಿಯಂತ್ರಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ| ವೈಜನಾಥ ಚಿಕ್ಕಬಸೆ, ಸಮಾಜಶಾಸ್ತ್ರದ ಮುಖ್ಯಸ್ಥ ಗಾಯತ್ರಿ ನೇಳ್ಗೆ, ರೈಚಲರಾಣಿ, ಸಮಾಜಶಾಸ್ತ್ರದ ಉಪನ್ಯಾಸಕ ಜ್ಯೋತಿ ಕರ್ಪೂರ, ಮಧುಸೂಧನ ಕುಲಕರ್ಣಿ, ಡಾ| ಸುರೇಖಾ ಬಿರಾದಾರ, ಡಿ.ವಿ. ಕಂಬಾರ, ಗೀತಾ ಪೋಸ್ತೆ, ಲಕ್ಷ್ಮೀ ಕುಂಬಾರ, ಸಂಗೀತಾ ಮಾನಾ, ಶಾರ್ಲೆಟ್ ಮೇಡಮ್‌ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next