Advertisement
ನಗರದ ಮೈಲೂರ್ ನೆಹರು ಯುವ ಕೇಂದ್ರದಿಂದ ನಡೆಸ ಸಮಾರಂಭದಲ್ಲಿ ಜಿಲ್ಲೆಯ ಯುವಕ ಸಂಘಗಳು ಹಾಗೂ ಯುವತಿ ಮಂಡಳಿಗಳಿಗೆ ವಿವಿಧ ಕ್ರೀಡಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
Related Articles
Advertisement
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, 1978ರಿಂದ ಬೀದರ್ ಜಿಲ್ಲೆಯ ಯುವಕ, ಯುವತಿಯರ ಸರ್ವಾಂಗೀಣ ವಿಕಾಸಕ್ಕಾಗಿ ನೆಹರು ಯುವ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸೇವೆ ಸಲ್ಲಿಸುವ ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತರು ಇದೊಂದು ವೃತ್ತಿ ಎಂದು ಪರಿಗಣಿಸದೆ, ಸಮಾಜ ಸೇವೆ ಎಂದು ಪರಿಗಣಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಮಾತನಾಡಿ, ಜಿಲ್ಲೆಯಲ್ಲಿ ನೆಹರು ಯುವ ಕೇಂದ್ರ 3 ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸುತ್ತಿದ್ದರೂ ಇಲ್ಲಿಯ ವರೆಗೆ ಸ್ವಂತ ಕಟ್ಟಡ ಹೊಂದದಿರುವುದು ವಿಪರ್ಯಾಸ. ಜಿಲ್ಲಾಡಳಿತದಿಂದ ನಿವೇಶನ ಪಡೆದರೆ, ಸಾಂಸ್ಕೃತಿ ಇಲಾಖೆಯಿಂದ 25 ಕೋಟಿ ಅನುದಾನ ಪಡೆಯಬಹುದಾಗಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜಕುಮಾರ ಪಸಾರ್ ಮಾತನಾಡಿ, ಸಮಾಜ ಪರಿವರ್ತನೆಯಲ್ಲಿ ಯುವ ಜನರ ಪಾತ್ರ ಮಹತ್ವದ್ದಾಗಿದ್ದು, ನೆಹರು ಯುವ ಕೇಂದ್ರ ಕಳೆದ ಮೂವತ್ತು ವರ್ಷಗಳಿಂದ ಯುವಜನರಿಗೆ ನುರಿತ ತರಬೇತಿ ನೀಡಿ ಸಶಕ್ತರನ್ನಾಗಿ ಮಾಡುತ್ತಲಿದ್ದು, ಸ್ವಾರ್ಥದ ಬೆನ್ನು ಹತ್ತಿರುವ ಇಂದಿನ ಯುವಜನತೆ ನಮ್ಮಂತಹ ಹಿರಿಯರ ಮಾರ್ಗದರ್ಶನ ಪಡೆದು ಸಶಕ್ತರಾಗಬೇಕು ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಯ್ಯ ಸ್ವಾಮಿ, ಪ್ರಭುಲಿಂಗ ಬಿರಾದಾರ, ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೀರಣ್ಣ ಲೋಣಿ, ಇಲಾಖೆಯ ಸಿಬ್ಬಂದಿ ಮೈನೋದ್ದಿನ್, ಯುವ ಸಂಘ, ಸಂಸ್ಥೆಗಳ ಪ್ರಮುಖರಾದ ಗಂಗಮ್ಮ ಬಾಬುರಾವ್ ಔರಾದ್, ವಂದನಾ ಖೇರ್ಡಾ, ರೇಣುಕಾ ಪಾಟೀಲ, ರಿಯಾಜಪಾಶಾ ಕೊಳ್ಳುರ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು.