Advertisement

ಮೋದಿ ಶ್ರೀಮಂತರ ಮನೆ ಖಜಾನೆಯ ಚೌಕಿದಾರ

12:47 PM Apr 14, 2019 | Naveen |

ಔರಾದ: ವೇದಿಕೆಯಲ್ಲಿ ಚೌಕಿದಾರನೆಂದು ಹೇಳಿ ಬಡ ಜನರ ಶಾಂತಿ, ನೆಮ್ಮದಿ ಭಂಗ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ನಿಜವಾದ ಹಾಗೂ ಬಡವರ ಪರವಾದ ಚೌಕೀದಾರರೇ ಅಲ್ಲ. ಅವರೊಬ್ಬ ಶ್ರೀಮಂತರ ಮನೆಯ ಖಜಾನೆಯ ಚೌಕಿದಾರರಾಗಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಠಾಣಾಕುಶನೂರ ಗ್ರಾಮದಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ರಂಗದಲ್ಲೂ
ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲಗೊಂಡಿದ್ದು, ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಒಂದಾಗಿ ಗಡಿ ತಾಲೂಕಿನಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿ
ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಐದು ವರ್ಷದ ಆಡಳಿತಾವ ಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳಿನ ಆಶ್ವಾಸನೆಗಳನ್ನು ನೀಡುತ್ತಾ ಪೊಳ್ಳು ಭರವಸೆ
ನೀಡಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ರೂ. ಜಮಾ, ವಿದೇಶದಲ್ಲಿನ ಕಪ್ಪು ಹಣ ವಾಪಸ್‌, ನಿರುದ್ಯೋಗಿ ಯುವಕರಿಗೆ ಉದ್ಯೋಗ ಹೀಗೆ ಸಾಲು ಸಾಲು ಭರವಸೆಗಳನ್ನು ನೀಡಿ ಮೋದಿ ಜನರಿಗೆ ಯಾಮಾರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸುಳ್ಳಿನ ಸರ್ದಾರರೇ
ತುಂಬಿರುವ ಬಿಜೆಪಿಗೆ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದರು.

ರೈತರು ತಮ್ಮ ಹೊದಲ್ಲಿ ಬೆಳೆದ ಧಾನ್ಯಗಳ ಬೆಲೆಯನ್ನು ಎರಡು ಪಟ್ಟು ಅಧಿಕವಾಗಿ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಭಾಷಣ ಮಾಡುವ ಮೋದಿ ಸರ್ಕಾರದ ಅವ ಧಿಯಲ್ಲಿ ರೈತರು ಬೆಳೆದ ತೊಗರಿ ಬೆಲೆ ಪ್ರತಿ ಕ್ವಿಟಲ್‌ಗೆ ಐದು ಸಾವಿರ ನೀಡಿದೆ, ಕಾಂಗ್ರೆಸ್‌ ನೇತೃತ್ವದ ಮನಮೋಹನಸಿಂಗ್‌ ಸರ್ಕಾರದ ಅವ ಧಿಯಲ್ಲಿ ಪ್ರತಿಕ್ವಿಂಟಲ್‌ ತೊಗರಿಗೆ 12 ಸಾವಿರ ರೂ. ಬೆಲೆ ನೀಡಲಾಗಿದೆ ಎಂದರು.

ಕಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿ, ಬೀದರ ಸಂಸದ ಭಗವಂತ ಖೂಬಾ ಅವರು ವಿದ್ಯಾವಂತರಾಗಿದ್ದರೂ
ಕೂಡ ತಮ್ಮ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಜಿಲ್ಲೆ ಸುಧಾರಣೆಯ ಬಗ್ಗೆ ಕಾಳಜಿ ಇರದೇ ಇರುವ ವ್ಯಕ್ತಿಯಿಂದ ಜಿಲ್ಲೆಯ
ಮತದಾರರು ದೂರವಾಗಿ ಉಳಿದು ಉತ್ತಮ ಆಡಳಿತಕ್ಕೆ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

Advertisement

ಸಂಸದ ಭಗವಂತ ಖೂಬಾ ಅಭಿವೃದ್ಧಿ ಕೆಲಸಗಳು ಕಾಗದ ಪತ್ರದಲ್ಲಿಯೇ
ಉಳಿದುಕೊಂಡಿವೆ. ಅವು ಕಾರ್ಯರೂಪಕ್ಕೆ ಬಂದಿಲ್ಲ. ಮಾಜಿ ಸಿಎಂ ಎನ್‌.ಧರ್ಮಸಿಂಗ್‌ ಆಡಳಿತಾವ ಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ತಾವು ಮಾಡಿರುವುದಾಗಿ ಕುರಿತು ತಮ್ಮ ಅಭಿವೃದ್ಧಿಯ ಪುಸ್ತಕದಲ್ಲಿ ಉಲ್ಲೇಖ ಮಾಡಿ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ.
ಸಂಸದರ ಸಾಧನೆ ರಸ್ತೆಯ ಪಕ್ಕದಲ್ಲಿ ಕುರ್ಚಿಗಳನ್ನು ಹಾಕಿರುವುದು ದೊಡ್ಡ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾರಿಂದ ಚಾಲನೆಗೊಂಡ ಬಸವಕಲ್ಯಾಣ ತಾಲೂಕಿನ ಗೋರಟಾ ಹುತಾತ್ಮರ ಸ್ಮಾರಕ ಹಾಗೂ ಸಂಸದರ ಆದರ್ಶ ಗ್ರಾಮಗಳ ಕಾಮಗಾರಿ ಆರಂಭಗೊಂಡು ಐದು ವರ್ಷ ಕಳೆದರೂ ಕೂಡ ಇಂದಿಗೂ ಕಾಮಗಾರಿ ಮುಗಿದಿಲ್ಲ ಎಂದರು. ಠಾಣಾಕುಶನೂರ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ಗಾಳಿ ಇದೆ. ಈ ಹಿಂದೆ ಈ ಕ್ಷೇತ್ರದಿಂದಲೇ ನಾನೂ ಜಿಪಂ ಸದಸ್ಯೆಯಾಗಿ ಜಿಪಂ ಉಪಾಧ್ಯಕ್ಷಳಾಗಿ ರಾಜ್ಯಮಟ್ಟದಲ್ಲಿ ಬೆಳೆದಿದ್ದೇನೆ. ಇಲ್ಲಿನ ಮತದಾರರು ತಮ್ಮ
ಮತದ ಮೂಲಕ ಇನ್ನೂಮ್ಮೆ ಶಕ್ತಿ ತೋರಿಸಲು ಮುಂದಾಗಬೇಕು ಎಂದರು.

ಮಾಜಿ ಶಾಸಕ ಗುಂಡಪ್ಪ ವಕೀಲ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು. ವಿಧಾನ
ಪರಿಷತ್‌ ಸದಸ್ಯ ವಿಜಯಸಿಂಗ್‌ ಮಾತನಾಡಿ, ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುವ ಮೂಲಕ ಪಕ್ಷ ಗೆಲ್ಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಸಚಿವ ರಹೀಂಖಾನ್‌, ಬಸವಕಲ್ಯಾಣ ಶಾಸಕ
ಬಿ.ನಾರಾಯಣ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next