ಝಳ ದಿನದಿಂದ ದಿನಕ್ಕೆ ಹೆಚ್ಚಾದಂತೆ ಚುನಾವಣೆ ಕಾವೂ ಕೂಡ ಹೆಚ್ಚಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ಎರಡು ಪಕ್ಷಗಳು ಸಮಯ ವ್ಯರ್ಥ ಮಾಡದೇ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿ ಪತ್ಯ ಮೆರೆದಿದ್ದು, ಇದೀಗ ಆ ಮತಗಳನ್ನು ತಮ್ಮ ಪಕ್ಷದ ಕಡೆಗೆ ವಾಲಿಸಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ.
Advertisement
ಬೀದರ ಲೋಕಸಭೆ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ವರ್ಷನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.45.59 ಮತ ಪಡೆದಿದ್ದರೆ,
ಬಿಜೆಪಿ ಶೇ.38.87 ಮತ ಪಡೆದಿತ್ತು. ಕಾಂಗ್ರೆಸ್ ಐದು ಕ್ಷೇತ್ರದಲ್ಲಿ ಜಯ
ಗಳಿಸಿತ್ತು. ಆದರೆ, ಬಿಜೆಪಿ ಕೆವಲ ಎರಡು ಕ್ಷೇತ್ರದಲ್ಲಿ ಮಾತ್ರ ಗೆಲವು ಕಂಡಿತ್ತು.
ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 5 ಕಡೆ ವಿಜಯಿಯಾದರೆ,
ಬಿಜೆಪಿ ಎರಡು ಕಡೆ ಹಾಗೂ ಜೆಡಿಎಸ್ ಒಂದು ಕಡೆ ತನ್ನ ಶಾಸಕರನ್ನು ಹೊಂದಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಇರುವುದರಿಂದ ಕಾಂಗ್ರೆಸ್ ಪಕ್ಷ ಸೂಕ್ತವಾಗಿ ಬಳಸಿಕೊಂಡರೆ ಹೆಚ್ಚಿನ ಬಲ ಬರಬಹುದಾಗಿದೆ. ಅಲ್ಲದೆ, ಚಿಂಚೋಳಿ ಶಾಸಕ ಜಾಧವ್ ಬಿಜೆಪಿಗೆ ಸೇರ್ಪಡೆಯಾಗಿರುವುದು ಭಗವಂತ್ ಖೂಬಾಗೆ ಬಲ ಬಂದಂತಾಗಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಬೇರೆ ಬೇರೆ ಆಧಾರದಲ್ಲಿ
ನಡೆಯುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿವೆ.
Related Articles
17,50,370 ಮತದಾರರು ಹಕ್ಕು ಹೊಂದಿದ್ದಾರೆ. 8 ವಿಧಾನಸಭೆ ಕ್ಷೇತ್ರದಲ್ಲಿ
ಒಟ್ಟಾರೆ 1,999 ಮತ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.
Advertisement
ದುರ್ಯೋಧನ ಹೂಗಾರ