ಬೀದರ: ಬೀದರ ಜಿಲ್ಲೆಯ ಬಸವಕಲ್ಯಾಣ ನಗರಸಭೆ, ಹುಮನಾಬಾದ, ಚಿಟಗುಪ್ಪಾ, ಭಾಲ್ಕಿ ಪುರಸಭೆಗಳಿಗೆ ಹಾಗೂ ಔರಾದ(ಬಿ) ಪಟ್ಟಣ ಪಂಚಾಯಿತಿ ಸೇರಿ ಒಟ್ಟು 128 ವಾರ್ಡ್‌ಗಳಿಗೆ ಮೇ 9ರಿಂದ ಮೇ 16ರ ವರೆಗೆ ಒಟ್ಟು 502 ನಾಮಪತ್ರಗಳು ಸ್ವೀಕೃತವಾಗಿವೆ.
ಐಎನ್‌ಸಿ ಪಕ್ಷದಿಂದ 150, ಬಿಜೆಪಿಯಿಂದ 132, ಜೆಡಿಎಸ್ 113, ಬಿಎಸ್‌ಪಿ 23, ಎಐಎಂಐಎಂ 10, ವೆಲ್ಫೇರ್ ಪಾರ್ಟಿ 1 ಹಾಗೂ 73 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬಸವಕಲ್ಯಾಣ ನಗರಸಭೆಯ 31 ವಾರ್ಡ್‌ಗಳಿಗೆ ಒಟ್ಟು 135 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಐಎನ್‌ಸಿ ಪಕ್ಷ 31, ಬಿಜೆಪಿ 29, ಜೆಡಿ(ಎಸ್) 29, ಬಿಎಸ್‌ಪಿ 6, ಎಐಎಂಐಎಂ 10, ವೆಲ್ಫೇರ್ ಪಾರ್ಟಿ 1 ಹಾಗೂ 29 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಹುಮನಾಬಾದ ಪುರಸಭೆಯ 27 ವಾರ್ಡ್‌ಗಳಿಗೆ ಒಟ್ಟು 85 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಐಎನ್‌ಸಿ ಪಕ್ಷ 27, ಬಿಜೆಪಿ 22, ಜೆಡಿ(ಎಸ್) 18, ಬಿಎಸ್‌ಪಿ 1 ಹಾಗೂ 17 ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಚಿಟಗುಪ್ಪಾ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 87 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಐಎನ್‌ಸಿ ಪಕ್ಷ 23, ಬಿಜೆಪಿ 22, ಜೆಡಿ(ಎಸ್) 21, ಬಿಎಸ್‌ಪಿ 10 ಹಾಗೂ 11 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಭಾಲ್ಕಿ ಪುರಸಭೆಯ 27 ವಾರ್ಡ್‌ಗಳಿಗೆ 124 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಐಎನ್‌ಸಿ ಪಕ್ಷ 39, ಬಿಜೆಪಿ 39, ಜೆಡಿ(ಎಸ್) 34, ಬಿಎಸ್‌ಪಿ 4 ಹಾಗೂ 8 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಔರಾದ(ಬಿ) ಪಟ್ಟಣ ಪಂಚಾಯತ್‌ನ 20 ವಾರ್ಡ್‌ಗಳಿಗೆ ಒಟ್ಟು 71 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಐಎನ್‌ಸಿ ಪಕ್ಷ 30, ಬಿಜೆಪಿ 20, ಜೆಡಿಎಸ್ 11, ಬಿಎಸ್‌ಪಿ 2 ಹಾಗೂ 8 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ತಹಶೀಲ್ದಾರ್ ತಿಳಿಸಿದ್ದಾರೆ.