Advertisement
ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫಡರೇಷನ್ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಹಾಗೂ ಸಾರಿಗೆ ನಿಗಮಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರಸಕ್ತ ಸಂಸ್ಥೆಯಲ್ಲಿ ಜಾರಿಯಲ್ಲಿರುವ ಅವೈಜ್ಞಾನಿಕ ಫಾರಂ-4 ಚಾಲಕ, ನಿರ್ವಾಹಕರ ಮೇಲೆ ಕೆಲಸದ ಅವಧಿ ಹೆಚ್ಚಾಗಿರುವುದರಿಂದ 8 ಗಂಟೆ ಕೆಲಸದ ಅವಧಿಗೆ ಫಾರಂ-4ನ್ನು ಪರಿಷ್ಕರಿಸಬೇಕು. ಹೆಚ್ಚುವರಿ ಅವಧಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ಮಂಜೂರು ಮಾಡಬೇಕು. ಸಾರಿಗೆ ನಿಗಮಗಳ ಕಾರ್ಮಿಕ ಸಂಘದ ಪ್ರಕಾರ ಕೂಡಲೆ ಚುನಾವಣೆ ನಡೆಸಬೇಕು. ಕಾರ್ಮಿಕರ ಆತ್ಮಹತ್ಯೆ ಪ್ರಕಟಣಗಳಲ್ಲಿ ಸಂಬಂಧಪಟ್ಟ ಘಟಕ, ವಿಭಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಆತ್ಮಹತ್ಯೆಗೆ ಶಣಾದ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನ ನೀಡಬೇಕು. ಮೋಟಾರ್ ವಾಹನ ತೆರಿಗೆ ವಿನಾಯಿತಿ ಕೂಡಬೇಕು. ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಬೇಕು. ಹೆದ್ದಾರಿ ಟೋಲ್ ಶುಲ್ಕ ರದ್ದು ಮಾಡಬೇಕು. ರಾಜ್ಯದಲ್ಲಿ ಸಿಬ್ಬಂದಿ ಅನುಪಾತವನ್ನು ಪ್ರತಿ ಬಸ್‌ಗೆ 8ರಂತೆ ಹೆಚ್ಚಿಸಿ ಕಾರ್ಮಿಕರ ಮೇಲಿನ ಕೆಲಸದ ಹೊರೆ ಕಡಿಮೆ ಮಾಡಬೇಕು. ಪ್ರಯಾಣ ಸಂದರ್ಭದಲ್ಲಿ ಗ್ರಾಹಕರು ಟಿಕೆಟ್ ಕಳೆದುಕೊಂಡಲ್ಲಿ ನಿರ್ವಾಹಕರನ್ನು ಶಿಕ್ಷೆಗೆ ಗುರಿ ಪಡಿಸುತ್ತಿರುವುದನ್ನು ನಿಲ್ಲಿಸಬೇಕು. ಸಂಸ್ಥೆಯ ಕಾರ್ಮಿಕರು ಇಂಟರ್‌ನೆಟ್ ಮೂಲಕ ರಜೆ ಪಡೆಯುವ ವ್ಯವಸ್ಥೆ ಜಾರಿ ಮಾಡಬೇಕು. ಘಟಕದ ತನಿಖಾ ಸಿಬ್ಬಂದಿಗಳು ಸಂಸ್ಥೆಯ ಅಧಿಕೃತ ಸಮವಸ್ತ್ರ ಧರಿಸಬೇಕು. ಹಾಗೂ ಸುಳ್ಳು ಪ್ರಕಣಗಳ್ನು ಪರಿಶೀಲಿಸಿ ತನಿಖಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರಿಗೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಸ್.ವಿ. ರೆಡ್ಡಿ, ಗೌರವ ಅಧ್ಯಕ್ಷ ಬಾಬುರಾವ್ ಹೊನ್ನಾ, ಸಂಘಟನಾ ಕಾರ್ಯದರ್ಶಿ ನಾಗೇಶ, ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ನೀಡೊದೆ ಸೇರಿದಂತೆ ಅನೇಕರು ಇದ್ದರು. Advertisement
ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಈಡೇರಿಸಲು ಒತ್ತಾಯ
04:49 PM May 29, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.