ಬೀದರ: ಬೀದರ, ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ(ಬಿ), ಭಾಲ್ಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿವ ನೀರು ಪೂರೈಸುತ್ತಿರುವ ಕಾರಂಜಾ ಜಲಾಶಯದಲ್ಲಿ ನೀರಿನ ಒಳ ಹರಿವು ಇಲ್ಲದೆ ಬರಡಾಗಿದೆ.
Advertisement
ಸದ್ಯ ಜಿಲ್ಲೆಯಲ್ಲಿ ಶೇ.63 ಮಳೆ ಸುರಿದರೂ ಕಾರಂಜಾ ಜಲಾಶಯಕ್ಕೆ 0.143 ಟಿಎಂಸಿ ನೀರು ಮಾತ್ರ ಒಳಹರಿವು ಬಂದಿದೆ. ಒಟ್ಟಾರೆ 1.262 ಟಿಎಂಸಿ ನೀರು ಸಂಗ್ರಹ ಇದೆ. ಆದರೆ, 0.375 ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿಲ್ಲ. ಸದ್ಯ 0.887 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಮುಂದಿನ ಚಳಿಗಾಲದಲ್ಲಿ ಭೀಕರ ಬರಗಾಲ ಸ್ಥಿತಿ ನಿರ್ಮಾಣಗೊಂಡು ಕುಡಿಯುವ ನೀರಿಗೆ ಜನರು ತತ್ತರಿಸುವ ಸ್ಥಿತಿ ಬಂದೊದಗಲಿದೆ. ಇನ್ನೂ ಒಂದು ತಿಂಗಳ ಕಾಲ ಮಳೆಗಾಲ ಇದ್ದು, ಉತ್ತಮ ಮಳೆ ಸುರಿದರೆ ಮಾತ್ರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪುತ್ತದೆ.
Related Articles
Advertisement
ಜಿಲ್ಲೆಯಲ್ಲಿ ಈವರೆಗೆ ಶೆ. 37 ಮಳೆ ಕೊರತೆ ಇದೆ. ಜಿಲ್ಲೆಯ ವಿವಿಧೆಡೆ ಹೆಸರು ಬೆಳೆಗಳ ಕಟಾವು ನಡೆಯುತ್ತಿದೆ. ಅಲ್ಲದೆ, ರೈತರಿಂದ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಠ 7,050 ರೂ. ಬೆಲೆ ನಿಗದಿ ಮಾಡುವಂತೆ ಹಾಗೂ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.•ಸಿ.ವಿದ್ಯಾನಂದ,
ಕೃಷಿ ಇಲಾಖೆ ಜಂಟಿ ನಿರ್ದೇಶಕ