Advertisement
ಕೆಲವು ದಿನಗಳಿಂದ ಜ್ವರದಿಂದ ಬಳಲಿ ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಜಿಪಂ ಅಧ್ಯಕ್ಷರು ಖುದ್ದಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಸರಿಯಾಗಿ ಸಿಗದಿದ್ದರೆ ನನಗೆ ಕರೆ ಮಾಡಿ ಮಾಹಿತಿ ನೀಡುವಂತೆ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ವಿದ್ಯಾರ್ಥಿನಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿಸುವಂತೆ ಅಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
Related Articles

ವಸತಿ ನಿಲಯದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಡುಗೆಯನ್ನು ಸರಿಯಾಗಿ ಮಾಡುವುದಿಲ್ಲ. ವಾರ್ಡನ್ ನಿಯಮಿತವಾಗಿ ವಸತಿ ನಿಲಯಕ್ಕೆ ಬರುವುದಿಲ್ಲ. ಅರೆಬರೆ ಬೆಂದ ಆಹಾರವನ್ನು ತಿನ್ನಲು ಕೊಡುತ್ತಾರೆ. ಬಾಳೆ ಹಣ್ಣು, ಮೊಟ್ಟೆ, ಇಡ್ಲಿ, ಪೂರಿಯ ಮುಖವನ್ನೇ ನೋಡಿಲ್ಲ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಎದುರು ಸಮಸ್ಯೆಗಳನ್ನು ಹೇಳಿಕೊಂಡರು.
ತೂತು ಬಿದ್ದ ಪುಟಾಣಿಯನ್ನು ಅಡುಗೆಗೆ ಬಳಸುತ್ತಾರೆ. ಬೇಳೆಯನ್ನು ತೊಳೆಯದೇ ಬಳಸುತ್ತಾರೆ. ಸ್ನಾನಕ್ಕೆ ಮತ್ತು ಕುಡಿಯಲು ಒಂದೇ ನೀರನ್ನು ಕೊಡುತ್ತಾರೆ. ರವಿವಾರ ವಿಶೇಷ ಅಡುಗೆ ಮಾಡುವುದಿಲ್ಲ. ಹೀಗಾಗಿ ಆ ದಿನ ನಾವು ಊಟ ಮಾಡದಂತಹ ಸ್ಥಿತಿ ಇರುತ್ತದೆ ಎಂದು ವಿದ್ಯಾರ್ಥಿಗಳು ದೂರಿದರು. ವಸತಿ ನಿಲಯದಲ್ಲಿ ಊಟ ಸರಿಯಾಗಿ ಕೊಡುವುದಿಲ್ಲ. ವಾರ್ಡನ್ ಸರಿಯಾಗಿ ಬರುವುದಿಲ್ಲ ಎಂದು ಯಾರ ಮುಂದೆಯೂ ಹೇಳಬೇಡಿ. ಹೇಳಿದರೆ ಊಟ ಕೊಡುವುದಿಲ್ಲ ಎಂದು ವಸತಿ ನಿಲಯದಲ್ಲಿನ ಗ್ರೂಪ್ ಡಿ ನೌಕರರು ನಮಗೆ ಬೆದರಿಕೆ ಹಾಕುತ್ತಾರೆ ಎಂದು ಇದೇ ವೇಳೆ ಕೆಲವು ವಿದ್ಯಾರ್ಥಿನಿಯರು ಆರೋಪಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಅಧ್ಯಕ್ಷರು, ಅಂತಹ ನೌಕರರನ್ನು ಬೇರೆಡೆ ವರ್ಗಾವಣೆ ಮಾಡಲು ಮೇಲಧಿಕಾರಿಗೆ ವರದಿ ಮಾಡುವುದಾಗಿ ತಿಳಿಸಿದ ಅವರು, ವಿದ್ಯಾರ್ಥಿಗಳು ವಸತಿ ನಿಲಯದಲ್ಲಿನ ಅವ್ಯಸ್ಥೆ ನೋಡಿ ಸುಮ್ಮನಿರಬಾರದು. ಇಲ್ಲಿ ಏನಾದರೂ ತೊಂದರೆಯಾದಲ್ಲಿ ಆ ಬಗ್ಗೆ ಪ್ರಶ್ನೆ ಮಾಡಬೇಕು. ಧೈರ್ಯದಿಂದ ಮಾತನಾಡಬೇಕು ಎಂದು ಸಲಹೆ ಮಾಡಿದರು.