ಬೀದರ: ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ
ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಿರುವ ಗಾಂ ಧಿ
ಸಂಕಲ್ಪ ಯಾತ್ರೆಯು ಮಂಗಳವಾರ ಹುಮನಾಬಾದ
ಮತ್ತು ಬೀದರ ದಕ್ಷಿಣ ಮತಕ್ಷೇತ್ರದಲ್ಲಿ ನಡೆಯಿತು.
ಹಳ್ಳಿಖೇಡ (ಬಿ) ಪಟ್ಟಣದ ಪುರಸಭೆಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಹಾತ್ಮ ಗಾಂಧಿ ಅವರ ಸಂದೇಶಗಳನ್ನು ಮುಟ್ಟಿಸಲು ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅವರ ಆಶಯದಂತೆ ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕು.
ಅಸ್ಪೃಶ್ಯತೆಯಂತಹ ಅನಿಷ್ಟಗಳನ್ನು ನಮ್ಮ ತಲೆಯಿಂದ ತೆಗೆಯಬೇಕು ಎಂದು ಜಾಗೃತಿ ಮೂಡಿಸಲಾಯಿತು. ನಂತರ ಪಟ್ಟಣದ ತರಕಾರಿ ಅಂಗಡಿಗೆ ತೆರಳಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸದಂತೆ ತಿಳಿಸಲಾಯಿತು. ನಂತರ ಅಮಿರಾಬಾದ, ಡಾಕುಳಗಿ, ಶಕ್ಕರಗಂಜವಾಡಿ ಗ್ರಾಮಗಳಲ್ಲಿ ಪಾದಯಾತ್ರೆ ಜರುಗಿತು. ಬಳಿಕ ಮರಕಲ್ ಗ್ರಾಮ ಪಂಚಾಯತ ಸದಸ್ಯರೊಂದಿಗೆ “ಚಾಯಿ ಪೇ ಚರ್ಚಾ’ ನಡೆಸಿ, ಹಳ್ಳಿಗಳ ಉದ್ಧಾರದಿಂದ ದೇಶದ ಉದ್ದಾರ ಸಾಧ್ಯ.
ಇದರಿಂದ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಲು ಸಾಧ್ಯ. ಸದಸ್ಯರು ಅವರವರ ಊರುಗಳ ಸ್ವತ್ಛತೆ, ನೀರು ಮಿತ ಬಳಕೆ ಮಾಡಿ, ರಸ್ತೆ-ಚರಂಡಿಗಳನ್ನು ನಿರ್ಮಿಸಿ ಜನರ ಆರೋಗ್ಯ ಕಾಪಾಡುವ ಮೂಲಕ ಗಾಂಧೀಜಿ ಕನಸು ನನಸು ಮಾಡಬೇಕು ಎಂದು ಕರೆ ನೀಡಿದರು.
ತಾಳಮಡಗಿ, ಕಂದಗೂಳ, ಮಾಡಗೂಳ, ಬೆಳಕೇರಾ, ಚಿಟಗುಪ್ಪ, ಕೊಡಂಬಲ್, ರಾಂಪೂರ, ಹಣಕೂಣಿ, ಸಿಂಧನಕೇರಾ ಮತ್ತು ಹುಡಗಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಿತು.