Advertisement

ಪೊಲೀಸ್‌-ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಿ

03:00 PM Jun 19, 2019 | Team Udayavani |

ಬೀದರ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಯಂತ್ರಗಳಾಗಿ, ಡಾಕ್ಟರ್‌, ಇಂಜಿನಿಯರ್‌ಗಳಾದೇ ಪೊಲೀಸ್‌ ಅಥವಾ ಸೈನ್ಯದಲ್ಲಿ ಸೇರಿ ದೇಶ ಸೇವೆಗೆ ಮುಂದಾಗಬೇಕು ಎಂದು ನೂತನ ಪೊಲೀಸ್‌ ಮಹಾ ನಿರ್ದೆಶಕ ರಾಘವೇಂದ್ರ ಔರಾದಕರ್‌ ಹೇಳಿದರು.

Advertisement

ನಗರದ ಪ್ರತಾಪ ನಗರದ ಬಡಾವಣೆಯಲ್ಲಿರುವ ಜನಸೇವಾ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ನಿರಂತರ ಪ್ರಯತ್ನದಿಂದ ಸಾಧನೆಯತ್ತ ನಡೆಯಬೇಕು. ಗುರು, ಹಿರಿಯರ ಬಗ್ಗೆ ಗೌರವ ಭಾವ, ಪರಸ್ಪರ ಸಹಕಾರ ಮನೋಭಾವ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಲ್ಲಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಮಾತನಾಡಿ, ನಮ್ಮ ನೆಲದ ಪುತ್ರರೊಬ್ಬರು ಈ ನಾಡಿನ ಪೊಲೀಸ್‌ ಮಹಾನಿರ್ದೆಶಕರಾಗಿ ನೇಮಕವಾಗಿರುವುದು ಸಂತಸ ತಂದಿದೆ. ಅವರನ್ನು ಮಾದರಿಯಾಗಿಟ್ಟುಕೊಂಡು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಮುಂದೆ ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು. ರೇವಣಸಿದ್ದಪ್ಪ ಜಲಾದೆ ಮಾತನಾಡಿ, ರಾಘವೇಂದ್ರ ಔರಾದಕರ್‌ ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ಅವರ ವಿಚಾರಗಳನ್ನು ಇಂದು ರಾಜ್ಯ ಸರ್ಕಾರ ಅವಲೋಕಿಸಿ, ಗೃಹ ಇಲಾಖೆಯಲ್ಲಿ ಬದಲಾವಣೆ ಮಾಡುತ್ತಿದೆ. ಅವರ ನಡೆಯನ್ನು ಜಿಲ್ಲೆಯ ಯುವಕರು ಅನುಸರಿಸಬೇಕು ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ| ಎಸ್‌.ಬಿ. ಸಜ್ಜನಶೆಟ್ಟಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚಂದ್ರಶೇಖರ ತಾಂಡೋರೆ, ಬೀದರ್‌ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ| ಚನ್ನಬಸಪ್ಪ , ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಪ್ರೊ| ಸಿ.ಎ. ಪಾಟೀಲ, ಇಂಜಿನಿಯರ್‌ ಹಾವಶೆಟ್ಟಿ ಪಾಟೀಲ, ಪ್ರೊ| ಗಂಗಶೆಟ್ಟಿ ಗಾದಗಿ, ವಿಕಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಶರಣಪ್ಪ ಸಿಕೆನಪುರೆ, ನಗರ ಘಟಕದ ಅಧ್ಯಕ್ಷ ಧನರಾಜ ರೆಡ್ಡಿ, ಶಿವರಾಜ ಹುಡೆದ್‌, ಶಿವಲಿಂಗಪ್ಪ ಜಲಾದೆ, ಸೌಭಾಗ್ಯವತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next