Advertisement

ಜಾನಪದಕ್ಕೆ ಮಹತ್ವ ನೀಡಿದ ಜಿಲ್ಲೆ ಬೀದರ

11:00 AM Aug 14, 2019 | Naveen |

ಬೀದರ: ಬೀದರ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಜಾನಪದಕ್ಕೆ ಹೆಚ್ಚು ಮಹತ್ವ ಇದೆ. ಜಿಲ್ಲೆಯ ಎಲ್ಲಾಕಡೆಗಳಲ್ಲಿ ಜಾನಪದ ಸೊಗಡು ಅಡಗಿದೆ ಎಂದು ಮಾಜಿ ಸಚಿವ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಜಾನಪದ ಕಲಾವಿದರ ಬಳಗದಿಂದ ಹಮ್ಮಿಕೊಂಡಿದ್ದ 2017ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿಗೆ ಭಾಜನರಾದ ಚಂದ್ರಪ್ಪಾ ಮಳಗೆ ಅವರ ಅಭಿನಂದನಾ ಹಾಗೂ ಜಾನಪದ ಗಾಯನ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬೀದರ ಜಿಲ್ಲೆಯ ಕನ್ನಡ ಭಾಷೆ ಬಹಳ ಅದ್ಭುತವಾಗಿದೆ. ಇಲ್ಲಿ ಸಾಹಿತ್ಯ ಮತ್ತು ಜಾನಪದದ ಸೊಗಡು ಅಡಗಿದೆ. ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಕರ್ನಾಟಕ ಜಾನಪದ ಅಕಾಡೆಮಿಯ ತಂಡ ತನ್ನ ಅಧಿಕಾರವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದೆ. ಲೇಖಕಿ ಪಾರ್ವತಿ ಸೋನಾರೆ ಅವರು ಚಂದ್ರಶಾ ಮಾಳಗೆ ಅವರ ಕುರಿತು ಪುಸ್ತಕ ಬರೆಯಲು ಆರಂಭಿಸಬೇಕು. ಪುಸ್ತಕ ಪ್ರಕಟಣೆಗೆ ಬೇಕಾದ ಖರ್ಚು-ವೆಚ್ಚದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಗುರು ಪಟ್ಟದ್ದೇವರು ಮಾತನಾಡಿ, ಅಶಾಂತಿಯ ಬದುಕಿಗೆ ಶಾಂತಿ ಹಾಗೂ ಸಮಾಧಾನ ನೀಡುವುದೇ ಜಾನಪದವಾಗಿದೆ. ಜಾನಪದ ಮನಸ್ಸನ್ನು ವಿಶಾಲವಾಗಿಸುತ್ತದೆ. ಹಳ್ಳಿಯಲ್ಲಿ ಗೀಗಿ ಪದ, ಕೋಲಾಟ ಸೇರಿದಂತೆ ಮೊದಲಾದ ಜಾನಪದ ಸೊಗಡು ನಶೀಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಜಿಲ್ಲೆಯಲ್ಲಿ ಜನಪದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಪದ ಕಲೆಯ ಕುರಿತು ಇಂದಿನ ಯುವ ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಪ್ರಕಾಶ ಅಂಗಡಿ ಮಾತನಾಡಿ, ಬೀದರ ಜಿಲ್ಲೆಯ ಕಲಾವಿದರು ಹೃದಯ ಶ್ರೀಮಂತಿಕೆ ಉಳ್ಳವಾಗಿದ್ದಾರೆ. ಜಾನಪದ ಕಲಾವಿದರ ಕುರಿತು ಪುಸಕ್ತಗಳು ರಚನೆ ಆಗಬೇಕು. ಮುಂದಿನ ಯುವಕರಿಗೂ ಇಲ್ಲಿನ ಕಲಾವಿದರ ಕುರಿತು ಪರಿಚಯ ನೀಡುವ ಕೆಲಸ ಆಗಬೇಕು ಎಂದರು.

Advertisement

ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಡೊಳ್ಳು ಕುಣಿತ ಕಲಾವಿದ ಬಿ.ಟಾಕಪ್ಪ ಕಣ್ಣೂರು ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ವಿಶೇಷವಾಗಿ ಬೀದರ ಜಿಲ್ಲೆಯ ಜಾನಪದ ಕಲಾವಿದರಾದ ಶರಣಪ್ಪ ಭೂತೆ ಮತ್ತು ಚಂದ್ರಶಾ ಮಾಳಗೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆಯುವಂತೆ ಮಾಡಿದ್ದು ನನಗೆ ಸಂತಸ ತಂದಿದೆ ಎಂದರು.

ಬೀದರ ಜಿಲ್ಲಾ ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಶಾಸಕ ರಹೀಂಖಾನ, ಜ್ಯೋತಿಲಿಂರ್ಂಗ ಹೊನ್ನಶೆಟ್ಟಿ, ನಿರ್ಮಲಾ ಡಿ.ಆರ್‌., ಅರುಣಕುಮಾರ ಸಿ., ಸುರೇಶ ಚೆನ್ನಶೆಟ್ಟಿ, ಸುನೀಲ ಆರ್‌, ಪಾರ್ವತಿ ಸೋನಾರೆ, ಎಚ್. ಪ್ರಕಾಶ, ಮಾರುತಿ ಬೌದ್ಧೆ, ಫರ್ನಾಂಡೀಸ್‌ ಹಿಪ್ಪಳಗಾಂವ, ವೀರಶೆಟ್ಟಿ ಪಾಟೀಲ, ರಾಜಕುಮಾರ ಹೆಬ್ಟಾಳೆ, ಎಸ್‌.ವಿ. ಕಲ್ಮಠ, ವಸಂತಕುಮಾರ ನೌಬಾದೆ, ನಾಗೇಂದ್ರ ದಂಡೆ, ಎಂ.ಜಿ. ಗಂಗನಪಳ್ಳಿ, ಎಂ.ಜಿ. ದೇಶಪಾಂಡೆ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next