Advertisement
ನಗರದ ಎಕೆ ಕ್ಯಾಂಟಿನೆಂಟಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಯಿತು. ಆಂಗ್ಲ ಹಾಗೂ ಕನ್ನಡ ಮಾಧ್ಯಮದಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ನಾಲ್ವರು ಹಾಗೂ ಕನ್ನಡ ಮಾಧ್ಯಮದಲ್ಲಿ ಐವರು ರ್‍ಯಾಂಕ್ ಗಳಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಗುರುನಾನಕ ಶಾಲೆಯ ಅಪ್ಪು ಗಣೇಶ ಪ್ರಥಮ ರ್‍ಯಾಂಕ್ ಗಳಿಸಿದ್ದು, 20 ಸಾವಿರ ರೂ. ಚೆಕ್, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಶ್ರೀಯಾ ಸ್ವಾಮಿ ದ್ವಿತೀಯ (15 ಸಾವಿರ ರೂ.), ಸುಜಲ್ ಬಿರಾದಾರ ಹಾಗೂ ಶ್ರದ್ಧಾ ತೃತೀಯ (ತಲಾ 10 ಸಾವಿರ ರೂ.) ಪುರಸ್ಕಾರ ಪಡೆದರು.
ವಿದ್ಯಾರ್ಥಿಗಳು ಸೇರಿ ಒಟ್ಟು 20 ಸಾಧಕ ಪ್ರತಿಭೆಗಳಿಗೆ ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ಪಿಯುಸಿ ಉಚಿತ ಪ್ರವೇಶ ನೀಡುವ ಘೋಷಣೆ ಮಾಡಲಾಯಿತು. ಟೆಸ್ಟ್‌ನಲ್ಲಿ ಉತ್ತಮ ಸಾಧನೆ ಮಾಡಿದ 85 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಚೆಕ್ ಸಹ ನೀಡಿ ಬೆನ್ನು ತಟ್ಟಲಾಯಿತು.
Related Articles
Advertisement
ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಕಳೆದ ತಿಂಗಳ 19 ರಂದು ಆ್ಯಪ್ಟಿಟ್ಯೂಡ್ ಟೆಸ್ಟ್ ನಡೆಸಲಾಗಿತ್ತು. ಇದರಲ್ಲಿ ಕನ್ನಡ ಮಾಧ್ಯಮದ 1100 ಹಾಗೂ ಆಂಗ್ಲ ಮಾಧ್ಯಮದ 700 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಪಿಯುಸಿ ಶಿಕ್ಷಣ ಒದಗಿಸುವುದಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ಅಟೋಮಿಕ್ ಅಕಾಡೆಮಿಯೊಂದಿಗೆ ಕೈ ಜೋಡಿಸಲಾಗಿದೆ. ನೀಟ್, ಐಐಟಿ, ಎನ್‌ಐಟಿ ಸೇರಿ ಇತರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಪರಿಣಿತ ಬೋಧಕ ವೃಂದವಿದೆ ಎಂದರು.
ಅಕಾಡೆಮಿ ನಿರ್ದೇಶಕರಾದ ಪ್ರೊ| ಶ್ರೀಧರ್, ಪ್ರೊ| ರಾಜೇಂದ್ರ ಬಾಬು, ಶಿಕ್ಷಣ ತಜ್ಞ ಪ್ರತಾಪ ದೊಡ್ಮನೆ ಮಾತನಾಡಿದರು. ಅಟೋಮಿಕ್ ಅಕಾಡೆಮಿ ಕೋಶಾಧ್ಯಕ್ಷ ವಿಜಯ್ ಮಾನೆ, ರಘುನಂದನ್, ಉದ್ಯಮಿ ಕಿಶೋರ ಬೆಮಳಖೇಡಕರ್, ತ್ರಿಲೋಕ್, ಪ್ರಾಚಾರ್ಯ ಸುರೇಶ ಕುಲಕರ್ಣಿ ಇದ್ದರು. ಆಡಳಿತಾದಿ ಕಾರಿ ಲೋಕೇಶ ಉಡಬಾಳೆ ನಿರೂಪಿಸಿದರು.