Advertisement

ದೇಶದ ಗಮನ ಸೆಳೆದ ಡಿಸಿಸಿ ಬ್ಯಾಂಕ್‌

07:31 PM Sep 05, 2019 | Naveen |

ಬೀದರ: ಹಲವು ಅಪರೂಪದ ಯೋಜನೆಗಳ ಯಶಸ್ವಿ ಅನುಷ್ಠಾನದ ಮೂಲಕ ಡಿಸಿಸಿ ಬ್ಯಾಂಕ್‌ ಇಡೀ ದೇಶದ ಗಮನ ಸೆಳೆದಿದೆ. ಬ್ಯಾಂಕ್‌ ಆಡಳಿತ ಮಂಡಳಿ ಹಾಗೂ ಬ್ಯಾಂಕ್‌ ಅಧಿಕಾರಿ- ಸಿಬ್ಬಂದಿ ಶ್ರಮವೂ ಸಾಧನೆ ಹಿಂದಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದಲ್ಲಿ ಬೀದರ ಡಿಸಿಸಿ ಬ್ಯಾಂಕ್‌ ನೌಕರರ ಒಕ್ಕೂಟ, ನೌಕರರ ಮತ್ತು ನೌಕರೇತರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸ್ವಸಹಾಯ ಸಂಘ, ರೈತರಿಗೆ ಸಕಾಲದಲ್ಲಿ ಬೆಳೆ ಸಾಲ, ಕೃಷಿ ಅಭಿವೃದ್ಧಿಗಾಗಿ ಮಧ್ಯಾವಧಿ ಸಾಲ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪರಿಣಾಮಕಾರಿ ಅನುಷ್ಠಾನ ಮುಂತಾದವುಗಳು ಡಿಸಿಸಿ ಬ್ಯಾಂಕ್‌ ಅಧಿಕಾರಿ, ಸಿಬ್ಬಂದಿ ಶ್ರಮಕ್ಕೆ ಸಾಕ್ಷಿಯಾಗಿವೆ. ಬ್ಯಾಂಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕ ಸೇವೆ ಬ್ಯಾಂಕ್‌ ಉತ್ತರೋತ್ತರ ಬೆಳವಣಿಗೆಗೆ ಕಾರಣವಾಗಿದೆ. ಆಡಳಿತ ಮಂಡಳಿ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಬ್ಯಾಂಕ್‌ ಅಭಿವೃದ್ಧಿಗಾಗಿ, ಗ್ರಾಹಕರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳು ರೂಪುಗೊಳ್ಳುತ್ತಿವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನೌಕರರ ಸಂಘದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತದೆ. ಬ್ಯಾಂಕ್‌ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ನೌಕರರನ್ನು ನಿರ್ಲಕ್ಷಿಸುವುದಿಲ್ಲ. ನೌಕರರ ಸಂಘ, ಗೃಹ ನಿರ್ಮಾಣ ಸಂಘ ಮತ್ತು ಪತ್ತಿನ ಸಂಘಕ್ಕೆ ಸಂಬಂಧಿಸಿದಂತೆ ಎಲ್ಲ ಬೇಡಿಕೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ನೌಕರ ವರ್ಗದ ಹಿತ ರಕ್ಷಣೆ ಆಡಳಿತ ವರ್ಗದ ಆದ್ಯತೆಯಾಗಲಿದೆ. ಯಾವುದೇ ಕಾರಣಕ್ಕೂ ನೌಕರರ ಹಿತಕ್ಕೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ಬ್ಯಾಂಕ್‌ ನೌಕರರ ಒಕ್ಕೂಟ ಅಧ್ಯಕ್ಷ ವಿಠ್ಠಲ ರೆಡ್ಡಿ ಯಡಮಲ್ಲೆ ಮಾತನಾಡಿ, ಒಕ್ಕೂಟದ ಪ್ರಗತಿ ಕುರಿತು ವಿವರಿಸಿದ ಅವರು, ನೌಕರ ವರ್ಗಕ್ಕೆ ನಿಯಮಾನುಸಾರ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಆಡಳಿತ ಮಂಡಳಿ ಒದಗಿಸುತ್ತಿದೆ. ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಉಪಾಧ್ಯಕ್ಷ ಭೀಮರಾವ ಪಾಟೀಲ ಹಾಗೂ ಇತರ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

Advertisement

ನೌಕರರ ಒಕ್ಕೂಟದ ಉಪಾಧ್ಯಕ್ಷ ಚನ್ನಬಸಯ್ಯ ಎಚ್., ಖಜಾಂಚಿ ಅರವಿಂದ ಎಂ., ಕಾರ್ಯದರ್ಶಿ ರಾಜಕುಮಾರ ಅಣದೂರ, ನಿರ್ದೇಶಕ ಬಸವರಾಜ ಕೆ., ಪ್ರವೀಣ ದೊಡ್ಡಿ, ಶಾಂತಕುಮಾರ ಎಸ್‌., ಸತೀಶಕುಮಾರ ಅಶೋಕರಾವ, ಉಮಾದೇವಿ ಸಿ., ಬ್ಯಾಂಕ್‌ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸದಾಶಿವ ಪಾಟೀಲ, ಉಪಾಧ್ಯಕ್ಷ ಚನಶೆಟ್ಟಿ, ನಿರ್ದೇಶಕರಾದ ಬಸವರಾಜ, ಜಗದೀಶ ರಾಗಾ, ರಾಜಕುಮಾರ ಬಿ., ಸಂಜೀವಕುಮಾರ ಶೆಟಕಾರ, ಬಸವಂತರಾವ ಕೆ., ಸೈಯ್ಯದ್‌ ರಾಹೇಲ್ ಅಹ್ಮದ್‌, ಗೌಸ್‌ ಮೋಯಿನೋದ್ದಿನ್‌, ಸಾಯಪ್ಪ ಎನ್‌., ಜಯಶ್ರೀ ಚಾಕುರೆ, ಅರ್ಚನಾ, ಶಿವನಾಥ ವಿ., ಕಾರ್ಯದರ್ಶಿ ಸವಿತಾ ಎಸ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next