Advertisement

ಬಸವಾದಿ ಶರಣರ ನಾಡು ಸಾಹಿತ್ಯ ಬೀಡು

12:35 PM Sep 23, 2019 | |

ಬೀದರ: ಬಸವಾದಿ ಶರಣರು ನಡೆದಾಡಿದ ಭೂಮಿಯ ಕಣ ಕಣದಲ್ಲಿ ಸಾಹಿತ್ಯ ಹುದಗಿದೆ. ಅದನ್ನು ಕಲ್ಯಾಣ ನಾಡಿನ ಕವಿಯಿತ್ರಿಯರು ತಮ್ಮ ಕವನಗಳ ಮೂಲಕ ಹೊರ ಹಾಕುತ್ತಿದ್ದು, ಇದು ಕವಿಯಿತ್ರಿಯರಿಗೆ ಪ್ರೇರಣಾದಾಯ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರು ಹೇಳಿದರು.

Advertisement

ನಗರದ ಜಿಲ್ಲಾ ರಂಗ ಮಂದಿರದಲ್ಲಿ ನೀಲಾಂಬಿಕಾ ಮಹಿಳಾ ಸಾಂಸ್ಕೃತಿಕ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರ ನಾಡು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಾಹಿತಿ ಹಂಸಕವಿ ಮಾತನಾಡಿ, ಬೀದರ ಜಿಲ್ಲೆಯಲ್ಲಿ 300ಕ್ಕೂ ಅಧಿ ಕ ಸಾಹಿತಿಗಳಿದ್ದು, ಈ ಪೈಕಿ ಸಿದ್ದಮ್ಮ ಸಂಗ್ರಾಮ ಬಸವಣ್ಣೋರ ಅವರು ಸೇರಿ 108 ಮಹಿಳಾ ಸಾಹಿತಿ ಹಾಗೂ ಕವಿಯಿತ್ರಿಯರು ಇದ್ದಾರೆ. ಧಾರವಾಡ, ಮೈಸೂರು ಮತ್ತು ಬೆಂಗಳೂರಿಗಿಂತ ಹೆಚ್ಚು ಕವಿಯಿತ್ರಿಯರು ಬೀದರ ಜಿಲ್ಲೆಯಲ್ಲಿದ್ದಾರೆ. ಬೀದರ ಜಿಲ್ಲೆ ಮುದ್ರಣ ಕ್ಷೇತ್ರದಲ್ಲಿಯೂ ಧಾರವಾಡ ಮತ್ತು ಗದಗ ಜಿಲ್ಲೆಗಳನ್ನು ಮೀರಿಸಿ, ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಪ್ರಕಾಶನ ಕ್ಷೇತ್ರಗಳಲ್ಲಿ ಕೂಡ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಸಿದ್ದಮ್ಮ ಸಂಗ್ರಾಮ ಬಸವಣ್ಣೋರ ಅವರ ಚೊಚ್ಚಲ ಪುಸ್ತಕ “ಆಶಾ ದೀವಿಗೆ’ ಯನ್ನು ಅಕ್ಕ ಅನ್ನಪೂರ್ಣ ಅವರು ಲೋಕಾರ್ಪಣೆ ಮಾಡಿದರು. ಹಿರಿಯ ಸಾಹಿತಿ ದೇಶಾಂಶ ಹುಡಗಿ ಮಾತನಾಡಿದರು. ಕವಿಯಿತ್ರಿ ಸಿದ್ದಮ್ಮ ಸಂಗ್ರಾಮ ಬಸವಣ್ಣೋರ ಪ್ರಾಸ್ತಾವಿಕ ಮಾತನಾಡಿದರು.

ಮಲ್ಲಯ್ಯ ಸ್ವಾಮಿ ಹಿರೇಮಠ, ಕಾಶಯ್ಯ ಸ್ವಾಮಿ ಮಠಪತಿ, ಬಾಬುರಾವ ಬಿರಾದಾರ ಚಿಟ್ಟಾ, ದೇವೇಂದ್ರ ವಲ್ಲೇಪೂರೆ, ಸುವರ್ಣಾ ಬಿರಾದಾರ ಚಿಟ್ಟಾ ಅವರನ್ನು ಸನ್ಮಾನಿಸಲಾಯಿತು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಬಸವರಾಜ ಧನ್ನೂರ, ಪಾರ್ವತಿ ವಿಜಯಕುಮಾರ ಸೋನಾರೆ, ತಾಪಂ ಸದಸ್ಯ ದಶರಥ ಮೋರ್ಗಿ ಚಿಟ್ಟಾವಾಡಿ, ಶ್ಯಾಮರಾವ ಬಸವಣ್ಣೋರ, ಬಿ.ಎಸ್‌. ಕುದರೆ, ಎಂ.ಜಿ. ಗಂಗನಪಳ್ಳಿ, ಶಿವಕುಮಾರ ಕಟ್ಟೆ, ಶಂಕರ ಪಾಟೀಲ, ಉಷಾ ಪ್ರಭಾಕರ, ಮಾಹಾರುದ್ರ ಡಾಕುಳಗಿ, ಸಂಗ್ರಾಮ ಬಸವಣ್ಣೋರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next