ಬೀದರ: ಶೋಷಿತ ವರ್ಗಗಳ (ಅಹಿಂದ) ಒಕ್ಕೂಟದಿಂದ ನ. 3ರಂದು ನಗರದ ಗಣೇಶ ಮೈದಾನದಲ್ಲಿ ನಡೆಯಲಿರುವ ಶೋಷಿತ ವರ್ಗಗಳ ಬೃಹತ್ ಜನ ಜಾಗೃತಿ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದ ಪ್ರಚಾರ ವಾಹನಗಳಿಗೆ ಗುರುವಾರ ಇಲ್ಲಿನ ಬೊಮ್ಮಗೊಂಡೇಶ್ವರ ವೃತ್ತದಲ್ಲಿ
ಚಾಲನೆ ನೀಡಲಾಯಿತು.
ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಚಾಲನೆ ನೀಡಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ ಅವರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಶೋಷಿತ ವರ್ಗದ ಮಹಿಳೆಗೆ ಜಿಪಂ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲಾಗುತ್ತಿದ್ದು, ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಮಾತನಾಡಿ, ಸಿದ್ಧರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯದ ಶೋಷಿತ ಜನರಿಗಾಗಿ ಕೈಗೊಂಡಿರುವ ಯೋಜನೆಗಳ ಋಣ ತೀರಿಸಲು ಈ ಅಭಿನಂದನೆ ನಡೆಯಲಿದೆ ಎಂದರು.
ನಗರಾಭಿವೃದ್ಧಿ ಪ್ರಾ ಧಿಕಾರದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ ಮಾತನಾಡಿ, ಸಮಾವೇಶದಲ್ಲಿ ಜಿಲ್ಲೆಯ ಶೋಷಿತ ವರ್ಗದ ಬಾಂಧವರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಒಕ್ಕೂಟದ ಪ್ರಮುಖರಾದ ಅನೀಲಕುಮಾರ ಬೆಲ್ದಾರ, ಅಬ್ದುಲ್ ಮನ್ನಾನ್ ಸೇಠ, ಮಾಳಪ್ಪ ಅಡಸಾರೆ, ರಮೇಶ ಡಾಕುಳಗಿ, ಕಲ್ಯಾಣರಾವ್ ಭೋಸ್ಲೆ, ಬಸವರಾಜ ಮಾಳಗೆ, ದಾಸ ಚಿದ್ರಿ, ದೇವದಾಸ ಚಿಮಕೋಡ, ಬಕ್ಕಪ್ಪ ದಂಡಿನ, ಗೋವರ್ಧನ ರಾಠೊಡ, ತುಕಾರಾಮ ಚಿಮಕೋಡ, ಲೋಕೇಶ ಮಿರ್ಜಾಪೂರ, ಮಾಣಿಕ ಬರೀದಾಪೂರ ಮತ್ತಿತರರು ಇದ್ದರು.