ಬೀದರ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜರುಗಿದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಯೋಗ ಸ್ಪರ್ಧೆಗೆ ತೆರೆ ಬಿದ್ದಿದೆ. ವಿವಿಧ ಭಂಗಿಗಳ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿದ 28 ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಕಲ್ಕತ್ತಾದಲ್ಲಿ ನ. 3ರಂದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಬಾಲಕಿಯರ ವಿಭಾಗ -ಪ್ರೌಢ ಶಾಲೆ: ಯೋಗ- ಶ್ರೇಯಾ ದಕ್ಷಿಣ ಕನ್ನಡ, ವಿಮಲಮ್ಮ ದಕ್ಷಿಣ ಕನ್ನಡ, ಸವಿತಾ ಬಿ.ಕೆ ಶಿವಮೊಗ್ಗ, ಅನನ್ಯ ಧಾರವಾಡ,
ಗಾರ್ಗಿ ಕಾರಂತ ಶಿವಮೊಗ್ಗ. ರಿದಮಿಕ ಯೋಗ: ಶಿಫಾಲಿ ದಕ್ಷಿಣ ಕನ್ನಡ, ಕಲಾತ್ಮಕ ಯೋಗ: ಮೇಘಾ ಸಂಗಪ್ಪ ಯಾದಗಿರಿ.
ಪ್ರಾಥಮಿಕ ಶಾಲೆ: ಯೋಗ- ಸೌಜನ್ಯ ರಮೇಶ ಚಿಕ್ಕೋಡಿ, ತೃಪ್ತಿ ದಕ್ಷಿಣ ಕನ್ನಡ, ತನ್ವಿತಾ ಬೆಂಗಳೂರು ಗ್ರಾಮಾಂತರ, ಅಂಕಿತ ಆರ್. ಮೈಸೂರು, ಲಕ್ಷ್ಮೀ ಮಾರುತಿ ಚಿಕ್ಕೋಡಿ. ರೀದಮಿಕ ಯೋಗ: ಈಶ್ವರಿ ಚಂದ್ರಶೇಖರ ಬೀದರ, ಕಲಾತ್ಮಕ ಯೋಗ: ಆತ್ಮಿಕ ಪುಷ್ಪಕರ ದಕ್ಷಿಣ ಕನ್ನಡ.
ಬಾಲಕರ ವಿಭಾಗ; ಪ್ರೌಢ ಶಾಲೆ: ಯೋಗ- ಶಶಾಂಕ ಶರಣಬಸಪ್ಪ ಕಲಬುರ್ಗಿ, ಶಿವಶರಣ ಭೀಮಪ್ಪ ಯಾದಗಿರ, ವರಪ್ರಸಾದ ಬೆಂಗಳೂರು ಗ್ರಾಮಾಂತರ, ಭೀಮಾಶಂಕರ ಬಾಲಪ್ಪ ಯಾದಗಿರ, ಎರಿಸ್ವಾಮಿ ತುಮಕೂರು, ರೀದಮಿಕ ಯೋಗ- ಅಭಿಷೇಕ ಹೆಗಡೆ ಶಿರಸಿ, ಕಲಾತ್ಮಕ ಯೋಗ- ಸಂಜು ಮಟ್ಟೇಪ್ಪ ಮಂಗಳೂರು.
ಪ್ರಾಥಮಿಕ ಶಾಲೆ: ಯೋಗ- ಆತೀಶ ಸಿದ್ದಪ್ಪ ಬೀದರ, ವಿನಯಕುಮಾರ ಕೆ. ಬೆಂಗಳೂರು ಗ್ರಾಮಾಂತರ, ಸಂಕೇತ ಗೋಪಾಲ ಉಡುಪಿ, ಅಭಿನವ ಟಿ.ಎಸ್. ದಕ್ಷಿಣ ಕನ್ನಡ, ಅಭಿಷೇಕ ಗೌಡ ಬೆಂಗಳೂರು ದಕ್ಷಿಣ. ರಿದಮಿಕ ಯೋಗ- ಮಹೇಂದ್ರ ಗೌಡ ಉಕ, ಕಲಾತ್ಮಕ ಯೋಗ- ಸಮರ್ಥ ಮೋಹನ ಬೀದರ.