Advertisement

ಹಬ್ಬಗಳಿಂದ ಸಾಮರಸ್ಯ: ಕಾಮಣ್ಣ

12:00 PM Dec 29, 2019 | Team Udayavani |

ಬೀದರ: ಎಳ್ಳಮಾವಾಸ್ಯೆ ಸಮರ್ಪಿಸುವ ಒಂದು ಉತ್ಸವ. ಹಬ್ಬ ನಮ್ಮ ಭಾವ್ಯಕ್ಯತೆ ಮತ್ತು ಕೋಮು ಸಾಮರಸ್ಯ ಗಟ್ಟಿಯಾಗಿಸುವ ವೈವಿಧ್ಯಮಯ ಹಬ್ಬವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.

Advertisement

ನಗರದ ಹಳೆ ನಾವದಗೇರಿಯ ಉದ್ಯಮಿ ಚಂದ್ರಶೇಖರ ಹೆಬ್ಟಾಳೆ ತೋಟದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಸಾಹಿತ್ಯ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಎಳ್ಳಮಾವಾಸ್ಯೆ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಹಾಗೂ ಶಿವರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಬ್ಬ ಎಂದರೆ ಪರ್ವ ಎಂದರ್ಥ. ಅದು ಸಂಭ್ರಮಿಸು ಅಥವಾ ಖುಷಿ ಪಡು ಎಂದಂತಾಗುತ್ತದೆ. ನಮ್ಮದು ದುಡಿದು ತಿನ್ನುವ, ಇರುವ ಸಂಪತ್ತಿನಲ್ಲಿ ಇತರರಿಗೆ ದಾನ ಮಾಡುವ ಸಂಸ್ಕೃತಿಯಾಗಿದೆ. “ಚರಗ’ ಎಂದರೆ ಅರ್ಪಿಸು, “ಒಲಗ್ಯಾ ಒಲಗ್ಯಾ ಚಾಲಂಪಲಗ್ಯಾ’ ಎಂದರೆ ಹಸಿರನ್ನು ಹಂಚಿಕೊಂಡು ಬದುಕು ಎಂದರ್ಥವಾಗುತ್ತದೆ ಎಂದರು.

ಆಧುನಿಕ ಜಗತ್ತಿನಲ್ಲಿ ಸಂಸ್ಕೃತಿ ಹಾಗೂ ಸಂಪ್ರದಾಯ ಮಾಯವಾಗುತ್ತಿವೆ. ಹಣ ಗಳಿಕೆಯ ಭರದಲ್ಲಿ ಗುಣ ಕಳೆದು ಕೊಳ್ಳುತ್ತಿದ್ದೇವೆ. ವಿದ್ಯೆ ಗಳಿಸುವ ಭರದಲ್ಲಿ ಬುದ್ದಿ ಸ್ಥಿಮಿತತೆ ಕಳೆದುಕೊಳ್ಳುತ್ತಿದ್ದೇವೆ. ವಿದೇಸಿ ವ್ಯಾಮೋಹಕ್ಕೆ ಬಲಿಯಾಗಿ ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದಿರುವ ಉತ್ಸವಗಳು, ಜಾತ್ರೆ, ಜಯಂತಿಗಳಿಗೆ ಬೇರೆ ಅರ್ಥ ಕಲ್ಪಿಸುತ್ತಿದ್ದೇವೆ. ಆದ್ದರಿಂದ ಭಾರತ
ಮತ್ತೆ ವಿಶ್ವಗುರುವಾಗಿಸಲು ಹಾಗೂ ಸಮೃದ್ಧ ದೇಶ ಎನಿಸಿಕೊಳ್ಳಲು ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ಮಾರು ಹೋಗಬೇಕಿದೆ ಎಂದರು.

ಅಕ್ಕ ಅನ್ನಪೂರ್ಣ ತಾಯಿ ಸಾನ್ನಿಧ್ಯ ವಹಿಸಿ ಮಾತನಾಡಿ, ಎಳ್ಳ ಅಮಾವಾಸ್ಯೆಯನ್ನು ವಕ್ಕಲಿಗ ಮುದ್ಧಣ್ಣ ಅವರ ಜಯಂತಿಯಾಗಿ
ಆಚರಿಸಲಾಗುತ್ತದೆ. ಎಳ್ಳ ಅಮಾವಾಸ್ಯೆ ಎಂದರೆ ಹಂಚಿಕೊಂಡು ಬದುಕುವ, ಆರೋಗ್ಯಪೂರ್ಣ ಜೀವನ ನೀಡುವ ಹಬ್ಬವಾಗಿದೆ. ಜನಪದರು ಶರಣ ಸಂಸ್ಕೃತಿಯಲ್ಲಿ ಬದುಕಿ ಬಾಳುವ ಮೂಲಕ ಇಂಥ ಅರ್ಥಪೂರ್ಣ ಉತ್ಸವಗಳಿಗೆ ಮಾರು ಹೋಗಿದ್ದರು.

Advertisement

ಯುವ ಪೀಳಿಗೆ ಅನುಕರಿಸಬೇಕಾಗಿರುವುದು ಅಗತ್ಯ ಇದೆ ಎಂದು ಕರೆ ನೀಡಿದರು. ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ
ಸಮಾರಂಭ ಉದ್ಘಾಟಿಸಿ ಮಾತನಾಡಿ, ಬೀದರ ಜಿಲ್ಲೆ ಜಾನಪದರ ತವರೂರು, ಪುಣ್ಯವಂತರ ಬೀಡು. ಸರ್ವಧರ್ಮಿಯರ ಸಹಭಾಗಿತ್ವದ ನೆಲೆಯಾಗಿದ್ದರಿಂದಲೇ ಇಲ್ಲಿ ಅನ್ನ ನೀರು ಎಲ್ಲವೂ
ಹಿತವಾಗಿದೆ ಎಂದು ಬಣ್ಣಿಸಿದರು.

ಎಸ್‌ಪಿ ಟಿ. ಶ್ರೀಧರ್‌ ಮಾತನಾಡಿ, ಎಳ್ಳ ಅಮಾವಾಸ್ಯೆ ಹಬ್ಬ ಕೃಷಿಯನ್ನು ಉತ್ತೇಜಿಸುವ, ಸಂಸ್ಕೃತಿಯನ್ನು ಪ್ರತಿನಿಧಿಸುವ ಹಬ್ಬವಾಗಿದೆ. ಇದು ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಿಸುವ ಭಾವನಾತ್ಮಕ ಸನ್ನಿವೇಶವೂ ಹೌದು ಎಂದರು. ಡಾ|ಗಂಗಾಂಬಿಕೆ
ಮಾತನಾಡಿ, ಎಳ್ಳ ಅಮಾವಾಸ್ಯೆ 12ನೇ ಶತಮಾನದ ಬಸವಾದಿ ಶರಣರ ಕಾಯಕ ಹಾಗೂ ದಾಸೋಹ ತತ್ವವನ್ನು ಸಾರುತ್ತದೆ ಎಂದರು.

ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ ವೇದಿಕೆಯಲ್ಲಿದ್ದರು. ಸಂಗೀತಾ ಮೂಲಗೆ, ದಿಲೀಪ ದೇಸಾಯಿ, ಹಿರಾಚಂದ್‌ ವಾಘಮಾರೆ, ಲಕ್ಷ್ಮೀಬಾಯಿ ಬೋಚ್ರೆ, ಹಾಗೂ ಲಕ್ಷ್ಮೀಕಾಂತ ಹಿಂದೊಡ್ಡಿ ಅವರಿಗೆ ಶಿವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಪ್ಪಳದ ಜಾನಪದ ಕಲಾವಿದ ಜೀವನಸಾಬ್‌ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಹೆಬ್ಟಾಳೆ ಸ್ವಾಗತಿಸಿದರು. ಮೀರಾ ಖೇಣಿ ನಿರೂಪಿಸಿದರು. ಎಸ್‌.ಬಿ. ಕುಚನಾಳ ವಂದಿಸಿದರು. ಭಾಗವಹಿಸಿದ್ದವರು ಭಜ್ಜಿ, ಹುಗ್ಗಿ, ಅಂಬಲಿ ಸವಿದು
ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next