Advertisement

ಗಮನಸೆಳೆದ ವೈಮಾನಿಕ ಪ್ರದರ್ಶನ

10:08 AM Jul 25, 2019 | Naveen |

ಬೀದರ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬೀದರ ವಾಯುನೆಲೆಯಲ್ಲಿ ಬುಧವಾರ ನಡೆದ ವೈಮಾನಿಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

Advertisement

ಮೈನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಶಾಲಾ ವಿದ್ಯಾರ್ಥಿಗಳು, ಪಾಲಕರು, ವಾಯುನೆಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷಿಯಾದರು. ಬಾನಂಗಳದಲ್ಲಿ ವಿಮಾನಗಳ ಚಕಿತಗೊಳಿಸುವ ಹಾರಾಟ ಕಂಡು ವಿದ್ಯಾರ್ಥಿಗಳು ಜಯಘೋಷ ಕೂಗಿ ಸಂತಸ ವ್ಯಕ್ತಪಡಿಸಿದರು. ಪ್ರದರ್ಶನದುದ್ದಕ್ಕೂ ಜೈಹಿಂದ್‌, ವಂದೇ ಮಾತರಂ ಎನ್ನುವ ಜಯಘೋಷಗಳು ಮೊಳಗಿದವು.

ಏರ್‌ ಫೋರ್ಸ್‌ ಶಾಲೆ, ಕೇಂದ್ರೀಯ ವಿದ್ಯಾಲಯ, ಸಂಸ್ಕಾರ ಸ್ಕೂಲ್, ಗುರುನಾನಕ್‌, ಗ್ಲೋಬಲ್ ಸೈನಿಕ್‌ ಪಬ್ಲಿಕ್‌ ಶಾಲೆಗಳ ಒಟ್ಟು 600 ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೊಡ್ಡ ಪರದೆಯಲ್ಲಿ ಕಾರ್ಗಿಲ್ ಯುದ್ಧದ ಸನ್ನಿವೇಶಗಳನ್ನು ಬಿತ್ತರಿಸಲಾಯಿತು. ಎಸ್‌ಪಿ ಟಿ. ಶ್ರೀಧರ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ. ಪಾಟೀಲ, ನಗರಸಭೆ ಪೌರಾಯುಕ್ತ ಬಲಭೀಮ ಕಾಂಬಳೆ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next