Advertisement

ಬಸ್‌ ಪಾಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

10:09 AM Jul 05, 2019 | Naveen |

ಬೀದರ: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವಂತೆ ಒತ್ತಾಯಿಸಿ ನಗರದ ಬಿವಿಬಿ ಕಾಲೇಜು ಮುಖ್ಯರಸ್ತೆಯಲ್ಲಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯ ಸರ್ಕಾರ ರಾಜ್ಯದ ಎಲ್ಲ ವರ್ಗದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಕಾರ್ಯ ಆರಂಭಿಸಬೇಕು. ಅಲ್ಲದೆ, ಕೇವಲ 10 ತಿಂಗಳ ಪಾಸ್‌ ಬದಲಿಗೆ ಒಂದು ವರ್ಷ ಅವಧಿಯ ಪಾಸ್‌ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು. ಜಿಲ್ಲೆಯ ವಿವಿಧೆಡೆ ವಿದ್ಯಾರ್ಥಿಗಳ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದ್ದು, ಕೂಡಲೇ ಸಾರಿಗೆ ಅಧಿಕಾರಿಗಳು ಎಲ್ಲಕಡೆಗಳ ವಿದ್ಯಾರ್ಥಿಗಳ ಸಮಯಕ್ಕೆ ಅನುಸಾರ ಬಸ್‌ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ವಿಭಾಗಿಯ ನಿಯಂತ್ರನಾಧಿಕಾರಿಗಳಿಗೆ ಸಲ್ಲಿಸಲಾಯಿತು. ಎಬಿವಿಪಿ ರಾಜ್ಯಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ, ಅರವಿಂದ ಸುಂದಳಕರ, ಚನ್ನಬಸವ ಬಿರಾದಾರ, ಸಾಯಿ ಮೂಲಗೆ, ಸಚಿನ ಗುನ್ನಾಳೆ, ಸಾಯಿ ನಾಸಿಗರ, ಸಂತೋಷ ಹಾಲಿಪುರಗೆ, ನೌನಾಥ ಜಾಗರ, ಅಕಾಶ ಇಮ್ರಾನ, ಸೂರ್ಯಕಾಂತ, ಸಂತೋಷ, ಕಾರ್ತಿಕ, ಪ್ರೊ| ನಾಗೇಶ ಬಿರಾದಾರ, ಪ್ರೊ| ಧನರಾಜ ಪಾಟಿಲ್, ಪ್ರೊ| ಯುನುಸ್‌, ಮಹೇಶ ಸಜ್ಜನ, ವಿರೇಂದ್ರ, ಶಿವಾನಿ, ವೈಷ್ಣವಿ, ವಿಜಯಕ್ಷ್ಮೀ, ಆಶಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next