Advertisement

ಭೀಮಾ ತೀರದ ಭೈರಗೊಂಡ ಮೇಲಿನ ದಾಳಿ ಪ್ರಕರಣ :ಪೊಲೀಸರಿಂದ ಮತ್ತೆ ನಾಲ್ವರ ಬಂಧನ

05:54 PM Nov 08, 2020 | sudhir |

ವಿಜಯಪುರ : ನವೆಂಬರ್ 2 ರಂದು ನಡೆದಿದ್ದ ಭೀಮಾ ತೀರದ ಮಹಾದೇವ ಭೈರಗೊಂಡ ಮೇಲಿನ ಗುಂಡಿನ ದಾಳಿ ಹಾಗೂ ಇಬ್ಬರ ಹತ್ಯೆ ಪ್ರಕರಣದಲ್ಲಿ ವಿಜಯಪುರ ಪೊಲೀಸರು ಮತ್ತೆ ನಾಲ್ವರು ಆರೋಪಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಸದರಿ ‌ಪ್ರಕರಣದಲ್ಲಿ ಬಂಧಿತರ ಸಂಖ್ಯೆ11 ಕ್ಕೆ ಏರಿಕೆಯಾಗಿದೆ.

Advertisement

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಎಸ್ಪಿ ಅನುಪಮ್ ಅಗರ್ ವಾಲ್ , ನಗರದ ಹೊರ ವಲಯದ ಕನ್ನಾಳ ಬಳಿ ಮಹಾದೇವ ಭೈರಗೊಂಡ ಹಾಗೂ ಸಹಚರರ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಮಹಾದೇವ ಭೈರಗೊಂಡ ತೀವ್ರವಾಗಿ ಗಾಯಗೊಂಡು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ರಚನೆಯಾಗಿರುವ ವಿವಿಧ ಅಧಿಕಾರಿಗಳ ತಂಡ ಮತ್ತೆ ನಾಲ್ವರು ಆರೋಪಗಳನ್ನು ಬಂಧಿಸಿದೆ.

ಇದನ್ನೂ ಓದಿ:ಪತ್ನಿಯನ್ನು ತೊರೆದ ಪತಿ! ತಿಂಗಳಿಗೆ 1.5 ಲಕ್ಷ ರೂ. ಪರಿಹಾರ ನೀಡಲು ಪತಿಗೆ ಕೋರ್ಟ್‌ ಆದೇಶ!

ಬಂಧಿತರನ್ನು ವಿಜಯಪುರ ನಗರದ ರಾಜರತ್ನ ಕಾಲೋನಿಯ ಕಾಶಿನಾಥ ತಾಳೀಕೋಟೆ (23), ಬಬಲೇಶ್ವರ ತಾಲೂಕ ಸಾರವಾಡ ಗ್ರಾಮದ ಯುನೀಸ್ ಅಲಿ ಮುಜಾವರ್ (24), ವಿಜಯಪುರ ನಗರದ ಕುಂಬಾರ ಗಲ್ಲಿ ನಿವಾಸಿ ರಾಜು ಗುನ್ನಾಪುರ (27), ವಿಜಯಪುರ ತಾಲೂಕಿನ ಯೋಗಾಪುರ ನಿವಾಸಿ ಸಿದ್ದು ಮೂಡಲಗಿ (24 ) ಎಂದು ಗುರುತಿಲಾಗಿದೆ.

Advertisement

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1 ಮಚ್ಚು, 2 ಮೊಬೈಲ್, 2 ಬೈಕ್ ವಶಕ್ಕೆ ಪಡೆದಿರುವುದಾಗಿ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ.

ನವೆಂಬರ್ 2 ರಂದು ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ಎನ್ ಎಚ್ 50 ರಲ್ಲಿ ಘಟನೆ ನಡೆದಿತ್ತು. ಮಹಾದೇವ ಭೈರಗೊಂಡ ಪ್ರಯಾಣಿಸುತ್ತಿದ್ದ ಕಾರಿಗೆ ಆರೋಪಿಗಳು ಟಿಪ್ಪರ್ ಮೂಲಕ ಡಿಕ್ಕಿ ಮಾಡಿ, ಬಳಿಕ ಗುಂಡಿನ ದಾಳಿ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಬಳಸಿದ್ದರು. ಮಹಾದೇವ ಭೈರಗೊಂಡ ದೆಹಕ್ಕೆ ಮೂರು ಗುಂಡು ಹೊಕ್ಕಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next