Advertisement

ಗೋ ಶಾಲೆ ನಿರ್ಮಾಣಕ್ಕೆ ಭೀಮನಕಟ್ಟೆ ಮಠದಿಂದ ಜಾಗ: ಗೋ ಪ್ರೇಮಿಗಳಲ್ಲಿ ಸಂತಸ

07:27 PM Dec 01, 2021 | Team Udayavani |

ತೀರ್ಥಹಳ್ಳಿ: ಭೀಮನಕಟ್ಟೆಯ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಮಠದ ಒಡೆತನದಲ್ಲಿರುವ ಮೇಗರವಳ್ಳಿ ಸಮೀಪದ ಕೊಳಿಗೆಬೈಲು ಜಾಗವನ್ನು ಗೋ ಶಾಲೆ ಮಾಡುವುದಕ್ಕಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಮಂಗಳವಾರ ಗೋ ರಕ್ಷಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ಗೋ ಪ್ರೇಮಿಗಳು ಪಟ್ಟಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ನಂತರ ಭೀಮನಕಟ್ಟೆ ಮಠದಲ್ಲಿ ಗೋ ಪ್ರೇಮಿಗಳ ಸಭೆ ನಡೆಯಿತು, ಈ ವೇಳೆ ಮಠದ ಒಡೆತನದಲ್ಲಿರುವ ಜಾಗವನ್ನು ಗೂ ಶಾಲೆಗೆ ನೀಡುವ ಭರವಸೆ ನೀಡಲಾಯಿತು.

ಮುಂದಿನ ದಿನಗಳಲ್ಲಿ ಶ್ರೀ ಮಠದಿಂದ ಉದ್ದೇಶಿಸಿರುವ ಗೋ‌ ಸಂರಕ್ಷಣಾ ಕಾರ್ಯದ ವಿವರವನ್ನು ಮಠದ ದಿವಾನರಾದ ಸಾಗರ್ ಭಟ್‌ರವರು ವಿವರಿಸಿದ್ದಾರೆ .

ಇದರಿಂದ ಗೋ ಪ್ರೇಮಿಗಳಲ್ಲಿ ಸಂತಸ ಉಂಟು ಮಾಡಿದೆ.

Advertisement

ಇದನ್ನೂ ಓದಿ : ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ

Advertisement

Udayavani is now on Telegram. Click here to join our channel and stay updated with the latest news.

Next