Advertisement
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣು ಒಪ್ಪಂದ ಸಂದರ್ಭದಲ್ಲಿ ಸಂಸದರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಸಂಸತ್ ನಲ್ಲಿ ಒಪ್ಪಂದದ ವಿರುದ್ಧ ಮತಹಾಕಿ, ಕಾಂಗ್ರೆಸ್ ಸೇರಲು ಸಿದ್ದರಾಗಿದ್ದರು. ಆಗ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅವರ ಆಪ್ತರೊಬ್ಬರಿಂದ ಈ ಮಾಹಿತಿ ನನಗೆ ತಿಳಿದಿತ್ತು. ಇಂಥ ವ್ಯಕ್ತಿ ಪಕ್ಷ ನಿಷ್ಠೆ, ಪಕ್ಷದ ಸಂಘಟನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
Related Articles
Advertisement
ಯತ್ಮಾಳ ಎಂದೂ ಪಕ್ಷ ನಿಷ್ಠೆ ತೋರಿದವರಲ್ಲ. ಸ್ವಯಂಕೃತ ನಡೆಯಿಂದಲೇ ರಾಜಕೀಯ ಅವಸಾನ ಕಂಡವರು. ಆದರೂ ಪಕ್ಷ ಅವರಿಗೆ ಕೊಟ್ಡ ಅವಕಾಶ, ಗೌರವವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲಗೊಂಡು, ಉದೀಗ ಯಡಿಯೂರಪ್ಪ ವಿರುದ್ಧ, ಮಠಾಧೀಶರ ವಿರುದ್ಧ ಮಾತನಾಡುವ ವರ್ತನೆಯನ್ನು ಮುಂದುವರೆಸಿದ್ದಾರೆ ಎಂದು ಯತ್ನಾಳ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಎರಡು ವರ್ಷದಿಂದ ವಿಜಯಪುರ ಮಹಾನಗರ ಪಾಲಿಕೆ ಚುನಾಯಿತ ಆಡಳಿತವಿಲ್ಲ. ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಜನತೆ ಶಾಪ ಹಾಕುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಾಗಳು ಸ್ಥಗಿತಗೊಂಡಿವೆ. ಮುಖ್ಯಮಂತ್ರಿ ಬದಲಾಯಿಸುವ ಮೊದಲು ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಲಿ ಎಂದು ಟೀಕಾ ಪ್ರಹಾರ ಮಾಡಿದರು.
ನಿಮ್ಮ ತಪ್ಪು ನಡವಳಿಕೆಯಿಂದ ನಿಮ್ಮ ರಾಜಕೀಯ ಅವಸಾನ ಗುಂಡಿ ತೋಡಿಕೊಂಡಿದ್ದೀರಿ. ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಯತ್ನಾಳ ಅವರಿಗೆ ಸಲಹೆ ನೀಡಿದರು.