Advertisement

ಕಾಂಗ್ರೆಸ್ ಗೆ ಹಾರಲು ಹೊರಟಿದ್ದ ಯತ್ನಾಳ್ ಪಕ್ಷ ನಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ:ಹದನೂರು

03:56 PM Jul 21, 2021 | Team Udayavani |

ವಿಜಯಪುರ: ತಮಗೆ ಸಹಾಯ ಮಾಡಿದವರ ವಿರುದ್ದ ಕೃತಜ್ಞತೆ ಇಲ್ಲದೇ ಮಾತನಾಡುವ ವ್ಯಕ್ತಿ ಯತ್ನಾಳ್. ತಮ್ಮ ರಾಜಕೀಯ ಅವಸಾನಕ್ಕೆ ಅನ್ಯರ ಮೇಲೆ ಹೊಣೆ ಹಾಕುತ್ತ ತಿರುಗುತ್ತಿರುವ ಶಾಸಕ ಯತ್ನಾಳ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ವೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಖಜಾಂಚಿ ಭೀಮಾಶಂಕರ ಹದನೂರು‌ ಆಕ್ರೋಶ ಹೊರಹಾಕಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣು ಒಪ್ಪಂದ ಸಂದರ್ಭದಲ್ಲಿ ಸಂಸದರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಸಂಸತ್ ನಲ್ಲಿ ಒಪ್ಪಂದದ ವಿರುದ್ಧ ಮತಹಾಕಿ, ಕಾಂಗ್ರೆಸ್ ಸೇರಲು ಸಿದ್ದರಾಗಿದ್ದರು. ಆಗ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅವರ ಆಪ್ತರೊಬ್ಬರಿಂದ ಈ ಮಾಹಿತಿ ನನಗೆ ತಿಳಿದಿತ್ತು. ಇಂಥ ವ್ಯಕ್ತಿ ಪಕ್ಷ ನಿಷ್ಠೆ, ಪಕ್ಷದ ಸಂಘಟನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಈಗ ನಾನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಆಗಿದ್ದೆ, ರಾಜ್ಯದಲ್ಲಿ ನಾನೇ ಹಿರಿಯ ಅಂತೆಲ್ಲ ಹೇಳುತ್ತ ತಿರುಗುವುದನ್ನು ಬಿಟ್ಡು ಮತ್ತೇನನ್ನೂ ಮಾಡಿಲ್ಲ ಎಂದು ದೂರಿದರು.

ಇದನ್ನೂ ಓದಿ:ಅನಾರೋಗ್ಯದ ನಡುವೆಯೂ ಆಪ್ತನ ಆರೋಗ್ಯ ವಿಚಾರಿಸಿದ ಜನಾರ್ದನ ಪೂಜಾರಿ!

ನಗರದಲ್ಲಿ ಅಭಿವೃದ್ಧಿ ಕಡೆಗಣಿಸಿ, ಕೇವಲ ಪಕ್ಷದ ವರಿಷ್ಠರ ವಿರುದ್ಧ ರಾಜಕೀಯ ಟೀಕೆ ಮಾಡುವುದನ್ನು ಬಿಟ್ಟು ಮತ್ತೇನನ್ನೂ ಮಾಡಿಲ್ಲ. ಈ ಹಿಂದೆಯೂ ಇಂಥದ್ದೇ ವರ್ತನೆಯಿಂದ ಪಕ್ಷದಿಂದ ಹೊರ ಹಾಕಿಸಿಕೊಂಡಿದ್ದ ಯತ್ನಾಳ್, ಮತ್ತೆ ಪಕ್ಷಕ್ಕೆ ಸೇರುವಾಗ ಯಡಿಯೂರಪ್ಪ ಬಂದರೆ ನಾನೂ ಬಿಜೆಪಿಗೆ ‌ಮರಳುತ್ತೇನೆ ಎಂದ ವ್ಯಕ್ತಿ ಇದೇ ಯತ್ನಾಳ. ಅತ್ತ ಬಿಜೆಪಿ ಅಧ್ಯಕ್ಷರಾಗಿದ್ದ ಪ್ರಹ್ಲಾದ ಜೋಶಿ, ಮಾಜಿ ಸಿ.ಎಂ. ಜಗದೀಶ್ ಶಟ್ಟರ ಅವರನ್ನು ಟೀಕಿಸುತ್ತಾರೆ. ಇದೀಗ ಮಠಾಧೀಶರ ವಿರುದ್ಧ ಹರಿಹಾಯುತ್ತಿದ್ದಾರೆ. ಗಾಜಿನ‌ ಮನೆಯಲ್ಲಿ ಕುಳಿತ ಅವರು ಮತ್ತೊಬ್ಬರಿಗೆ ಕಲ್ಲು ಎಸೆಯುವುದನ್ನು ಬಿಡಬೇಕು. ಅವರೊಬ್ಬ ವ್ಯಕ್ತಿಗೌರವ ತಿಳಿಯದವರು ಎಂದು ವಾಗ್ದಾಳಿ ನಡೆಸಿದರು.

Advertisement

ಯತ್ಮಾಳ ಎಂದೂ ಪಕ್ಷ ನಿಷ್ಠೆ ತೋರಿದವರಲ್ಲ. ಸ್ವಯಂಕೃತ ನಡೆಯಿಂದಲೇ ರಾಜಕೀಯ ಅವಸಾನ ಕಂಡವರು. ಆದರೂ ಪಕ್ಷ ಅವರಿಗೆ ಕೊಟ್ಡ ಅವಕಾಶ, ಗೌರವವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲಗೊಂಡು, ಉದೀಗ ಯಡಿಯೂರಪ್ಪ ವಿರುದ್ಧ, ಮಠಾಧೀಶರ ವಿರುದ್ಧ ಮಾತನಾಡುವ ವರ್ತನೆಯನ್ನು ಮುಂದುವರೆಸಿದ್ದಾರೆ ಎಂದು ಯತ್ನಾಳ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡು ವರ್ಷದಿಂದ ವಿಜಯಪುರ ಮಹಾನಗರ ಪಾಲಿಕೆ ಚುನಾಯಿತ ಆಡಳಿತವಿಲ್ಲ. ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಜನತೆ ಶಾಪ ಹಾಕುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಾಗಳು ಸ್ಥಗಿತಗೊಂಡಿವೆ. ಮುಖ್ಯಮಂತ್ರಿ ಬದಲಾಯಿಸುವ ಮೊದಲು ಕ್ಷೇತ್ರದ ಅಭಿವೃದ್ಧಿಗೆ ಗಮನ‌ ಹರಿಸಲಿ ಎಂದು ಟೀಕಾ ಪ್ರಹಾರ ಮಾಡಿದರು.

ನಿಮ್ಮ‌ ತಪ್ಪು ನಡವಳಿಕೆಯಿಂದ ನಿಮ್ಮ ರಾಜಕೀಯ ಅವಸಾನ ಗುಂಡಿ ತೋಡಿಕೊಂಡಿದ್ದೀರಿ. ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಯತ್ನಾಳ ಅವರಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next