Advertisement

ಭವಾನಿ ಫೌಂಡೇಶನ್‌ ವತಿಯಿಂದ ನಿರ್ಮಿತ ಸಮಾಜ ಭವನದ ಹಸ್ತಾಂತರ

02:02 PM Feb 06, 2019 | Team Udayavani |

ಮುಂಬಯಿ: ನೆರೆಯ ರಾಯಗಢ್‌ ಜಿಲ್ಲೆಯ ಪನ್ವೇಲ್‌ ತಾಲೂಕಿನ ಪಿರ್‌ಕಟ್‌ವಾಡಿ ಗ್ರಾಮದಲ್ಲಿ ನೆಲೆಸಿರುವ ಆದಿವಾಸಿ ಸಮಾಜದ ಜನರ ಮದುವೆ, ಮುಂಜಿ, ಸಭೆ, ಸಮಾರಂಭ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಮುಂಬಯಿಯ ಹೆಸರಾಂತ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಭವಾನಿ ಫೌಂಡೇಶನ್‌ ಸಮಾಜ ಭವನ ಯೋಜನೆಯ ಕಾರ್ಯ ತ್ವರಿತ ಗತಿಯಲ್ಲಿ  ಸಾಗುತ್ತಿದ್ದು, ಫೆ.9ರಂದು ಬೆಳಗ್ಗೆ ಈ ಭವನವು ಆದಿವಾಸಿಗಳ ಸೌಕರ್ಯಕ್ಕಾಗಿ ಹಸ್ತಾಂತರಗೊಳ್ಳಲಿದೆ. ಭವನದ ಕಾರ್ಯಯೋಜನೆಯನ್ನು ಪರಿಶೀಲಿಸಲು ಫೆ. 3ರಂದು ಬೆಳಗ್ಗೆ ಭವಾನಿ ಫೌಂಡೇಶನ್‌ ಇದರ ಅಧ್ಯಕ್ಷ ಕುಸುಮೋಧರ ಡಿ. ಶೆಟ್ಟಿ ಚೆಲ್ಲಡ್ಕ, ವಿಶ್ವಸ್ತರಾದ ಧರ್ಮಪಾಲ ದೇವಾಡಿಗ, ಸಕಾಲ್‌ ಪತ್ರಿಕೆಯ ದಿನೇಶ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ ಚೆಲ್ಲಡ್ಕ, ಪ್ರೇಮನಾಥ ಶೆಟ್ಟಿ ಮುಂಡ್ಕೂರು ಭವನದ ಸ್ಥಳಕ್ಕೆ ಭೇಟಿ ನೀಡಿದರು.

Advertisement

ಸುಮಾರು ಒಂದು ಸಾವಿರ ಮಂದಿ ಸೇರಬಹುದಾದ ಈ ಭವನವು ಸುಂದರವಾದ ವೇದಿಕೆ, ಎರಡು ಕೊಠಡಿಗಳು ಹಾಗೂ ಶೌಚಾಲಯದ ಸೌಲಭ್ಯವನ್ನು ಹೊಂದಿದ್ದು,ಪಿರ್ಕಟ್‌ವಾಡಿಯಲ್ಲದೆ ಪರಿಸರದ ಅರ್ಕತ್‌ವಾಡಿ, ಉಂಬರ್ನವಾಡಿ ಗ್ರಾಮಗಳ ಆದಿವಾಸಿಗಳಿಗೂ ಇದರಿಂದ ಪ್ರಯೋಜನ ಸಿಗಲಿದೆ. ಪಿರ್ಕಟ್‌ವಾಡಿಯ ಮಂಗಲ್‌ ಸಕಾರಾಮ್‌ ಪೋಕ್ಲ, ಸಮಾಜ ಸೇವಕ ಮುರಳೀಧರ ಪಾಲ್ವೆ ಮೇಲ್ವಿಚಾರಣೆಯಲ್ಲಿ ಈ ಭವನ ನಿರ್ಮಾಣಗೊಂಡಿದ್ದು, ಸ್ಥಳೀಯ ಗ್ರಾಮಸ್ಥರು ಭವಾನಿ 

ಫೌಂಡೇಶನ್‌ನ ಮಾನವೀಯ ಅನುಕಂಪದ ಸೇವೆಯನ್ನು ಹೊಗಳಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.  

ಚಿತ್ರ-ವರದಿ: ಪ್ರೇಮನಾಥ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next