ಮುಂಬಯಿ: ಭವಾನಿ ಫೌಂಡೇಶನ್ ಮುಂಬಯಿ ಇದರ ತೃತೀಯ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭವು ಅ. 3ರಂದು ಸಂಜೆ ಕುರ್ಲಾ ಪೂರ್ವ ಬಂಟರ ಸಂಘದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆಯಿತು.
ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ದಡ್ಡಂಗಡಿ ಚೆಲ್ಲಡ್ಕ ಕೆ. ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಹೊಟೇಲ್ ಉದ್ಯಮಿಗಳಾದ ಸುಬ್ಬಯ್ಯ ವಿ. ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಹೆಸರಾಂತ ವೈದ್ಯಾಧಿಕಾರಿ ಡಾ| ವಿಜಯ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಡಬದ ಏಮ್ಸ್ ಫಸ್ಟ್ ಗ್ರೇಡ್ ಕಾಲೇಜ್‌ನ ವಿಶ್ವಸ್ಥ ಸದಸ್ಯೆ, ಅಧ್ಯಕ್ಷೆ ಫೌಜಿಯಾ ಬಿ. ಎಸ್., ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಫೌಂಡೇಶನ್‌ನ ವಿಶ್ವಸ್ಥ ಸದಸ್ಯರಾದ ಸರಿತಾ ಕುಸುಮೋಧರ್ ಶೆಟ್ಟಿ, ಉಪಾ ಧ್ಯಕ್ಷ ಜೀಕ್ಷಿತ್ ಕುಸುಮೋಧರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ. ಮೊಯಿದ್ಧೀನ್ ಮುಂಡ್ಕೂರು, ಧರ್ಮಪಾಲ್ ಯು. ದೇವಾಡಿಗ, ಪಂಡಿತ್ ನವೀನ್‌ಚಂದ್ರ ಆರ್. ಸನಿಲ್, ಚೆಲ್ಲಡ್ಕ ರಾಧಾಕೃಷ್ಣ ಡಿ. ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಬಂಟ್ಸ್ ನ್ಯಾಯ ಮಂಡಳಿ ಕಾರ್ಯಾಧ್ಯಕ್ಷ ರವೀಂದ್ರ ಎಂ. ಅರಸ, ಸಮಾಜ ಸೇವಕರಾದ ಎ. ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಸೀತಾರಾಮ ಎಂ. ಶೆಟ್ಟಿ ಕೊಲಬಾ, ಸುಧಾಕರ್ ಎಸ್. ಹೆಗ್ಡೆ ಉಪಸ್ಥಿತರಿದ್ದರು. ಸಮ್ಮಾನಿತರಾದ ಕು| ಫೌಜಿಯಾ, ಡಾ| ವಿಜಯ ಶೆಟ್ಟಿ, ಗೋಪಾಲಕೃಷ್ಣ ಕುಂದರ್ ಮತ್ತು ಶಶಿಕಾಂತ್ ಠಾಕ್ರೆ ಸಮ್ಮಾನಕ್ಕೆ ಅಭಿನಂದನೆ ಸಲ್ಲಿಸಿದರು.
ಫೌಂಡೇಶನ್‌ನ ಜತೆ ಕೋಶಾಧಿಕಾರಿಗಳಾದ ಅಂಕಿತಾ ಜೆ. ಶೆಟ್ಟಿ ಮತ್ತು ನವೀನ್ ಎಸ್. ಶೆಟ್ಟಿ, ಸದಸ್ಯರಾದ ದಿನೇಶ್ ಎಸ್. ಶೆಟ್ಟಿ ಮಣಿಪುರ ಸಕಾಲ್, ಮುರಳೀಧರ್ ವಿ. ಪಾಲ್ವೆ, ರಾಜಲಕ್ಷಿ¾à ಸುಬ್ರಹ್ಮಣ್ಯಂ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಉನ್ನತಾಧಿಕಾರಿಗಳು, ವಿವಿಧ ಸಂಸ್ಥೆ ಗಳ ಮುಖ್ಯಸ್ಥರು ಸಹಕರಿಸಿದರು. ಫೌಂಡೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸೀಮಾ ಪವಾರ್, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಜತೆ ಕೋಶಾಧಿಕಾರಿ ಚೈತಾಲಿ ಪೂಜಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಣೀಲ್ ವಿವಾಲೆ ಸಮ್ಮಾನಿತರನ್ನು ಪರಿಚಯಿಸಿದರು. ಕರ್ನೂರು ಮೋಹನ್ ರೈ ನಿರೂಪಿಸಿ ದರು. ಅಶೋಕ್ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.
ಚಿತ್ರ-ವರದಿ : ರೊನಿಡಾ, ಮುಂಬಯಿ