Advertisement

ಯುದ್ಧ ವಿಮಾನ ಪೈಲಟ್‌ ಆಗಿ ತರಬೇತಿ ಪೂರ್ಣಗೊಳಿಸಿದ ಭಾವನಾ ಕಾಂತ್‌

11:29 PM May 22, 2019 | mahesh |

ಹೊಸದಿಲ್ಲಿ: ಯುದ್ಧ ಸನ್ನಿವೇಶದಲ್ಲೂ ಸಮರ ವಿಮಾನ ನಡೆಸುವ ಸಾಮರ್ಥ್ಯ ಹೊಂದಿದ ಪ್ರಥಮ ಮಹಿಳಾ ಪೈಲಟ್‌ ಆಗಿ ಫ್ಲೈಟ್‌ ಲೆಫ್ಟಿನೆಂಟ್‌ ಭಾವನಾ ಕಾಂತ್‌ ಬುಧವಾರ ಇತಿಹಾಸ ಬರೆದಿದ್ದಾರೆ. ಮಿಗ್‌ 21 ಬಿಸನ್‌ ಯುದ್ಧ ವಿಮಾನದಲ್ಲಿ ತರಬೇತಿ ಮುಗಿಸಿದ್ದು, ಹಗಲಲ್ಲಿ ವಿಮಾನ ನಡೆಸುವ ಅನುಮತಿ ಪಡೆದಿದ್ದಾರೆ.

Advertisement

ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯ ರಿಂಗ್‌ ಪದವಿ ಪಡೆದಿರುವ ಭಾವನಾ, ಸದ್ಯ ಬಿಕಾನೇರ್‌ನ ನಾಲ್‌ ಬೇಸ್‌ನಲ್ಲಿ ನಿಯೋಜ ನೆಗೊಂಡಿದ್ದಾರೆ. ರಾತ್ರಿ ವೇಳೆ ಯುದ್ಧ ವಿಮಾನ ಹಾರಾಟ ತರಬೇತಿ ಪೂರೈಸಿದ ಅನಂತರ ಅವರಿಗೆ ರಾತ್ರಿ ಹಾರಾಟದ ಅನು ಮತಿ ನೀಡಲಾಗುತ್ತದೆ. 2017ರ ನವೆಂಬರ್‌ನಲ್ಲಿ ಭಾವನಾ ಫೈಟರ್‌ ಸ್ಕ್ವಾಡ್ರನ್‌ಗೆ ನೇಮಕ ಗೊಂಡು, ಮಾರ್ಚ್‌ನಲ್ಲಿ ಒಂಟಿಯಾಗಿ ಮಿಗ್‌ 21 ಬಿಸನ್‌ ಹಾರಾಟ ಆರಂಭಿಸಿ ದ್ದರು. ಆಕೆಯ ಬದ್ಧತೆ, ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಗಿ ಗ್ರೂಪ್‌ ಕ್ಯಾಪ್ಟನ್‌ ಅನುಪಮ್‌ ಬ್ಯಾನರ್ಜಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next