ಹೌದು ಎನ್ನುತ್ತಿವೆ ಮೂಲಗಳು. ಅದಕ್ಕೆ ಪೂರಕವೆಂಬಂತೆ ಶುಕ್ರವಾರ ನಿರ್ಗಮಿತ ಸಿಎಂ ಮಾಣಿಕ್ ಸಹಾ ಅವರು ರಾಜ್ಯಪಾಲ ಸತ್ಯದೇವ್ ನರೈನ್ ಆರ್ಯರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
Advertisement
ಸದ್ಯದಲ್ಲೇ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಹೆಸರನ್ನು ನಿರ್ಧರಿಸಲಾಗುತ್ತದೆ. ಮಾ.8ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಬಿಜೆಪಿ ತಿಳಿಸಿದೆ.
ಇನ್ನೊಂದೆಡೆ, ಮೇಘಾಲಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಎನ್‌ಪಿಪಿ ಅಧ್ಯಕ್ಷ ಕಾನ್ರಾಡ್ ಕೆ.ಸಂಗ್ಮಾ ಅವರು ಶುಕ್ರವಾರ ರಾಜ್ಯಪಾಲ ಫಗು ಚೌಹಾಣ್‌ರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಬಿಜೆಪಿ ಮತ್ತು ಇತರರ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ತಿಳಿಸಿದ್ದಾರೆ.