Advertisement

ಸರ್ಕಾರದ ನಿರ್ಧಾರದ ಮೇಲೆ ಇಲಾಖೆ ಕಾರ್ಯಾಚರಣೆ: ಐಜಿಪಿ

05:22 PM Apr 09, 2020 | Naveen |

ಭಟ್ಕಳ: ಎಲ್ಲಾ ಜಿಲ್ಲೆಗಳ ಗಡಿ ಬಂದ್‌ ಮಾಡಲಾಗಿದ್ದು, ಜನರ ಓಡಾಟ ನಿರ್ಬಂಧಿ ಸುವುದು ಇದರ ಉದ್ದೇಶವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ದೇವ್‌ಜ್ಯೋತಿ ಹೇಳಿದರು. ಪಟ್ಟಣದಲ್ಲಿ ಇಲಾಖೆಯಿಂದ ಕೈಗೊಂಡ ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಏ.14ರ ನಂತರ ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಮೇಲೆ ಇಲಾಖೆ ಕಾರ್ಯಾಚರಣೆ ನಡೆಸಲಿದೆ.ಏ. 14ರ ನಂತರ ಬಂದೋಬಸ್ತ್ ಯಾವ ರೀತಿಯಾಗಿರಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ಕಡೆಯಿದ್ದವರು ಅವರವರ ಸ್ಥಾನ ಸೇರಲು ಅವಕಾಶ ನೀಡುವ ಕುರಿತೂ ಹೇಳಲು ಸಾಧ್ಯವಿಲ್ಲ ಎಂದರು.

Advertisement

ಭಟ್ಕಳದಲ್ಲಿ ಸಂಶಯಿತ ವ್ಯಕ್ತಿಯ ಪೂರ್ವಾಪರ ವಿಚಾರಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಲ್ಲಿ ಮಾತ್ರವಲ್ಲ, ಎಲ್ಲಾ ಜಿಲ್ಲೆಗಳಲ್ಲಿಯೂ ಗಡಿ ಬಂದ್‌ ಮಾಡಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಕೋವಿಡ್‌-19 ಕುರಿತು ಯಾವುದೇ ರೀತಿಯ ಮಾಹಿತಿ ಬಂದರೂ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ. ಭಟ್ಕಳದಲ್ಲಿ ಪರೀಕ್ಷೆಗೆ ಕಳುಹಿಸಿದ ಮಾದರಿಗಳಲ್ಲಿ ಅನೇಕರದ್ದು ನೆಗೆಟಿವ್‌ ಬಂದಿರುವುದು ಉತ್ತಮ ಬೆಳವಣಿಗೆ ಎಂದರು. ಎಸ್‌ಪಿ ಶಿವಪ್ರಕಾಶ ದೇವರಾಜು, ಡಿಎಸ್‌ಪಿ ಗೌತಮ್‌, ನಗರ ಠಾಣೆ ಪಿಎಸ್‌ಐ ಎಚ್‌.ಬಿ. ಕುಡಗುಂಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next