Advertisement

ಭಟ್ಕಳ: ವಿಧಾನ ಸಭಾ ಚುನಾವಣೆಯು ಹತ್ತಿರವಾಗುತ್ತಿದ್ದಂತೆಯೇ ಸೂಕ್ಷ್ಮ ಪ್ರದೇಶವೆನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ಭಟ್ಕಳ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪೊಲೀಸ್ ಹಾಗೂ ಸಿಆರ್ ಪಿಎಫ್ ತುಕಡಿ ಪಥ ಸಂಚಲನವನ್ನು ನಡೆಸುವ ಮೂಲಕ ಜನರಲ್ಲಿ ಶಾಂತಿಯುತ ಚುನಾವಣೆಯನ್ನು ನಡೆಸುವ ಕುರಿತು ಭರವಸೆ ಮೂಡಿಸುವಲ್ಲಿ ಯಶಸ್ವಿಯಾದವು.

Advertisement

ನಗರದಿಂದ ಹೊರಟ ಪಥ ಸಂಚಲನವು ರಾಷ್ಟ್ರೀಯ ಹೆದ್ದಾರಿಯಾಗಿ ಹೆಬಳೆ, ತೆಂಗಿನಗುಂಡಿ, ವೆಂಕಟಾಪುರ, ಶಿರಾಲಿಯಾದಿಯಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ್ದು ಸಾವಿರಾರು ಜನರು ಪಥ ಸಂಚಲನವನ್ನು ವೀಕ್ಷಿಸಿದರು. ಒಮ್ಮೆ ಅವಾಕ್ಕಾದ ಜನರು ನಂತರ ಇದು ಚುನಾವಣ ಪೂರ್ವ ತಯಾರಿ ಎಂದು ತಿಳಿಯುತ್ತಲೇ ಸಮಾಧಾನದ ನಿಟ್ಟುಸಿರು ಬಿಟ್ಟರು.

ಅತ್ಯಂತ ಶಿಸ್ತುಬದ್ದವಾಗಿ ನಡೆದ ಪಥ ಸಂಚಲನದಲ್ಲಿ ಭಟ್ಕಳ ಉಪ ವಿಭಾಗದ ಉಪಾಧೀಕ್ಷಕ ಶ್ರೀಕಾಂತ ಕೆ., ಇನ್ಸಪೆಕ್ಟರ್ ಚಂದನ ಗೋಪಾಲ, ಸಬ್ ಇನ್ಸಪೆಕ್ಟರ್ ಶ್ರೀಧರ ನಾಯ್ಕ, ನಗರ ಠಾಣೆ, ಗ್ರಾಮೀಣ ಠಾಣೆ, ಮುರ್ಡೇಶ್ವರ ಠಾಣೆಯ ಅಧಿಕಾರಿಗಳು, ಸಿಬಂದಿಗಳು, ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದಿದ್ದ ಸಿಬಂದಿಗಳು, ಮೀಸಲು ಪಡೆಯ ಸಿಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next