Advertisement
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ| ಅಮೃತ ಸೋಮೇ ಶ್ವರ ಅವರಿಗೆ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಡಾ| ಸೋಮೇಶ್ವರ ಅವರ ಪತ್ನಿ ನರ್ಮದಾ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಸಹಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ, ಕುಲಪತಿ ಡಾ| ಎಸ್.ರಮಾನಂದ ಶೆಟ್ಟಿ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ| ಸತೀಶ್ ಭಂಡಾರಿ, ಕುಲಸಚಿವರಾದ ಡಾ| ಎಂ.ಎಸ್. ಮೂಡಿತ್ತಾಯ, ಕ್ಷೇಮ ರಿಜಿಸ್ಟ್ರಾರ್ ಡಾ| ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಯ ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಪಿ. ಮಹಾಲಿಂಗೇಶ್ವರ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಡಾ| ನಾ.ದಾಮೋದರ ಶೆಟ್ಟಿ ಸ್ವಾಗತಿಸಿದರು. ಆಯ್ಕೆ ಸಮಿತಿಯ ಡಾ| ಚಿನ್ನಪ್ಪ ಗೌಡ ವಂದಿಸಿದರು. ಪ್ರಾಧ್ಯಾಪಕಿ ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.
Related Articles
ಪ್ರಶಸ್ತಿ ಸ್ವೀಕರಿಸಿದ ಡಾ|ಅಮೃತ ಸೋಮೇಶ್ವರ ಅವರು ಮಾತನಾಡಿ, ತುಳು ಹಾಗೂ ಕನ್ನಡ ಭಾಷಾ ಕ್ಷೇತ್ರದಲ್ಲಿ ಇನ್ನೊಂದಿಷ್ಟು ಕಾಲ ಯಥಾಸ್ಥಿತಿ ಸೇವೆ ಸಲ್ಲಿಸಬೇಕು ಎಂಬ ತುಡಿತ ನನ್ನಲ್ಲಿದೆ. ಅದಕ್ಕೆ ನನ್ನೊಳಗಿನ ಚೈತನ್ಯ ಹಾಗೂ ಅಭಿಮಾನ ಪೂರ್ವಕ ಆಶಯಗಳು ಸ್ಫೂರ್ತಿಯಾಗಲಿ ಎಂದರು.
Advertisement