Advertisement

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

03:19 PM Mar 28, 2024 | Team Udayavani |

ಕಿರಣ್‌ ರಾಜ್‌ ಅಭಿನಯದ ಚಿತ್ರ ಭರ್ಜರಿ ಗಂಡು ಚಿತ್ರದ ಹುಯ್ಯೋ ʼಹುಯ್ಯೋ ಮಳೆರಾಯʼ ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ.

Advertisement

ಪ್ರಸಿದ್ಧ್ ನಿರ್ದೇಶನದ ಈ ಚಿತ್ರಕ್ಕಾಗಿ ವಿ.ನಾಗೇಂದ್ರ ಪ್ರಸಾದ್‌ ಅವರು ಈ ಹಾಡನ್ನು ಬರೆದಿದ್ದಾರೆ. ರಘು ದೀಕ್ಷಿತ್‌ ಈ ಹಾಡನ್ನು ಹಾಡಿದ್ದಾರೆ. ಗುಮ್ಮಿನೇನಿ ವಿಜಯ್‌ ಸಂಗೀತ ನೀಡಿರುವ ಈ ಹಾಡಿಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟೀಸರ್‌ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಭರ್ಜರಿ ಗಂಡು ಏ. 5 ಕ್ಕೆ ಚಿತ್ರಮಂದಿರಗಳಿಗೆ ಬರಲಿದ್ದಾನೆ. ಪ್ರಸಿದ್ಧ್ ಸಿನಿಮಾಸ್‌, ಮದನ್‌ ಗೌಡ ಹಾಗೂ ಅನಿಲ್‌ ಕುಮಾರ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜನೆ,  ಕಿಟ್ಟಿ ಕೌಶಿಕ್‌ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ  ಬರೆದಿದ್ದಾರೆ. ಕಿರಣ್‌ ರಾಜ್‌ ಅವರಿಗೆ ನಾಯಕಿಯಾಗಿ ಯಶಾ ಶಿವ­ಕುಮಾರ್‌ ಇದ್ದಾರೆ.

ರಮೇಶ್‌ ಭಟ್‌ , ರಾಕೇಶ್‌ ರಾಜ್, ಸುರೇಖಾ, ವೀಣಾ ಸುಂದರ್‌, ಜಯಶ್ರೀ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next